ADVERTISEMENT

‘ಧರ್ಮ ರಕ್ಷಣೆಗೆ ಯುವಕರ ಪಾತ್ರ ಅವಶ್ಯ’

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 8:18 IST
Last Updated 18 ಸೆಪ್ಟೆಂಬರ್ 2013, 8:18 IST

ನಾಪೋಕ್ಲು: ಗಣೇಶ ಹಬ್ಬ ಆಚರಣೆ ಸಂದರ್ಭದಲ್ಲಿ ಯುವಕರು ಶ್ರದ್ಧಾ-ಭಕ್ತಿಯಿಂದ ಭಾಗವಹಿಸಬೇಕು. ಹಿಂದೂ ಧರ್ಮವನ್ನು ಗಟ್ಟಿಗೊಳಿಸುವಲ್ಲಿ ಯುವಕರ ಪಾತ್ರ ಮಹತ್ತರವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಉಷಾ ದೇವಮ್ಮ ಹೇಳಿದರು.

ಮೂರ್ನಾಡು ಗಜಾನನ ಯುವಕ ಸಂಘದ 10ನೇ ವರ್ಷದ ಗೌರಿ- ಗಣೇಶೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ನಿವೃತ್ತ ಪೊಲೀಸ್ ಅಧಿಕಾರಿ ಚೋಟು ಅಪ್ಪಯ್ಯ ಮಾತನಾಡಿ, ಧಾರ್ಮಿಕ ವಿಚಾರದಲ್ಲಿ ಕಟ್ಟುಪಾಡುಗಳಿಗೆ ಕಟುಬದ್ಧರಾಗಿದ್ದರೆ ಮಾತ್ರ ಧರ್ಮವನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.

ಸಂಘದ ಅಧ್ಯಕ್ಷ ಎ.ಕೆ. ಪೃಥ್ವಿ ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ದೀಘ್ರಕೇಶಿ ಶಿವಣ್ಣ, ಮಡಿಕೇರಿ ತಾಲ್ಲೂಕು ಬಿಜೆಪಿ ಉಪಾಧ್ಯಕ್ಷ ಮುಕ್ಕಾಟೀರ ರವಿ ಚೀಯಣ್ಣ ಇದ್ದರು.

ಸಂಘದ ವತಿಯಿಂದ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಬಿ.ಎಂ. ಸರಸ್ವತಿ ಮತ್ತು ಕಾಂತೂರು- ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಪುದಿಯೊಕ್ಕಡ  ಪೊನ್ನು ಮುತ್ತಪ್ಪ ಅವರನ್ನು ಸನ್ಮಾನಿಸಲಾಯಿತು.

ಸಂಘದ ವತಿಯಿಂದ ಕಳೆದ ಶೈಕ್ಷಣಿಕ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ಶಾಲಾ-– ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದ ಮೊದಲು ಅಯ್ಯಪ್ಪ ದೇವಾಸ್ಥಾನದಿಂದ ಕೇರಳದ ಚಂಡೆ, ಓಲಗ ಹಾಗೂ ಬ್ಯಾಡ್ ಸೆಟ್‌ನೊಂದಿಗೆ ಮುಖ್ಯ ಅತಿಥಿಗಳ ಮೆರವಣಿಗೆ ನಡೆಯಿತು.

ನಿಮ್ಯ ಕಿಶೋರ್ ತಂಡ ಪ್ರಾರ್ಥಿಸಿ, ಪೂರ್ಣಿಮಾ ಸುರೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಪುದಿಯೊಕ್ಕಡ ರಮೇಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.