ಪ್ರಜಾವಾಣಿ ವಾರ್ತೆ ಗೋಣಿಕೊಪ್ಪಲು : ಪೊನ್ನಂಪೇಟೆಯಿಂದ ಬೆಕ್ಕೆಸೊಡ್ಲೂರು ವರೆಗೆ 10 ಕಿಮೀ ದೂರ ಕಕ್ಕಡ ಪದಿನೆಟ್ಟ್
ಗೋಣಿಕೊಪ್ಪಲು: ಕಕ್ಕಡ ಪದಿನೆಟ್ಟ್ (ಹದಿನೆಂಟು)ಪ್ರಯುಕ್ತ ಆಗಸ್ಟ್ 3ರಂದು ಪೊನ್ನಂಪೇಟೆಯಿಂದ ಬೆಕ್ಕೆಸೊಡ್ಲೂರುವರೆಗೆ 10 ಕಿ.ಮೀ. ದೂರ ಮ್ಯಾರಥಾನ್ ಓಟ ನಡೆಯಲಿದೆ ಎಂದು ತತ್ವಂ ಅಸಿ ಚಾರಿಟೆಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಉಳುವಂಗಡ ಲೋಹಿತ್ ಭೀಮಯ್ಯ ಹೇಳಿದರು.
ಜನಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಿರಿಯರಿಂದ ಹಿರಿಯರವರೆಗೆ ಮ್ಯಾರಥಾನ್ ಓಟದ ಸ್ಪರ್ಧೆ ಅಂದು ಬೆಳ್ಳಿಗ್ಗೆ 7.30ಕ್ಕೆ ಪೊನ್ನಂಪೇಟೆಯಿಂದ ಆರಂಭವಾಗಲಿದೆ. ಬೆಕ್ಕೆಸೊಡ್ಲೂರುವರೆಗೆ 10 ಕಿ.ಮೀ. ಫ್ಯಾಮಿಲಿ ರನ್, 3 ಕಿ.ಮೀ. ವರೆಗೆ 16 ವರ್ಷದದ ಒಳಗೆ ಇರುವ ಬಾಲಕರು ಮತ್ತು ಬಾಲಕಿಯರಿಗೆ, 5 ಕಿ.ಮೀ. ವರೆಗಿನ ಓಟ 35 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ ಆಯೋಜಿಸಲಾಗಿದೆ ಎಂದು ಹೇಳಿದರು.
ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಜಬ್ಬೂಮಿ ಚಾರಿಟೆಬಲ್ ಟ್ರಸ್ಟ್ ಸಂಚಾಲಕ ಚೊಟ್ಟೆಕಮಾಡ ರಾಜೀವ್ ಬೋಪಯ್ಯ, ನಿರ್ದೇಶಕ ಮಲ್ಲಮಾಡ ಪ್ರಭು ಪೂಣಚ್ಚ, ತತ್ವಂ ಅಸಿ ಟ್ರಸ್ಟ್‌ನ ಕೊಣಿಯಂಡ ಮಂಜು ಮಾದಯ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.