ADVERTISEMENT

ಸಿಏಎಸ್‌‌ಸಿಇಯ ರಾಷ್ಟ್ರಮಟ್ಟದ ಅಥ್ಲೇಟಿಕ್ಸ್: ಕಾಲ್ಸ್ ಶಾಲೆಗೆ 12 ಪದಕ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 2:58 IST
Last Updated 1 ಅಕ್ಟೋಬರ್ 2024, 2:58 IST
ಗೋಣಿಕೊಪ್ಪಲು ಕಾಲ್ಸ್ ಶಾಲೆಯ ವಿದ್ಯಾರ್ಥಿಗಳಾದ ಎಸ್.ಗಗನ್, ದವಲ್ ದೇವಯ್ಯ, ಜನ್ಯ ಬೊಳ್ಳಮ್ಮ, ಕೆ.ಎಂ.ನೀಲಮ್ಮ, ನಿಶ್ಚಲ್ ಗೌಡ, ಆದರ್ಶ್, ಸ್ವಯಂ ಬೋಪಯ್ಯ, ದರ್ಶಲ್ ಸಾಯಿರೆಡ್ಡಿ, ಆರ ಮಿಠಾಯಿ ವಾಲ ಅಥ್ಲೆಟಿಕ್ಸ್‌‌ನಲ್ಲಿ ಪಾಲ್ಗೊಂಡು 12 ಪದಕ ಗಳಿಸಿದರು
ಗೋಣಿಕೊಪ್ಪಲು ಕಾಲ್ಸ್ ಶಾಲೆಯ ವಿದ್ಯಾರ್ಥಿಗಳಾದ ಎಸ್.ಗಗನ್, ದವಲ್ ದೇವಯ್ಯ, ಜನ್ಯ ಬೊಳ್ಳಮ್ಮ, ಕೆ.ಎಂ.ನೀಲಮ್ಮ, ನಿಶ್ಚಲ್ ಗೌಡ, ಆದರ್ಶ್, ಸ್ವಯಂ ಬೋಪಯ್ಯ, ದರ್ಶಲ್ ಸಾಯಿರೆಡ್ಡಿ, ಆರ ಮಿಠಾಯಿ ವಾಲ ಅಥ್ಲೆಟಿಕ್ಸ್‌‌ನಲ್ಲಿ ಪಾಲ್ಗೊಂಡು 12 ಪದಕ ಗಳಿಸಿದರು   

ಗೋಣಿಕೊಪ್ಪಲು: ಇಲ್ಲಿನ ಕಾಲ್ಸ್ ಶಾಲೆ 16 ವಿದ್ಯಾರ್ಥಿಗಳು ಹೈದರಾಬಾದಿನ ಗಾಜಿಬೋಲಿ ಸ್ಟೇಡಿಯಂನಲ್ಲಿ ಈಚೆಗೆ ನಡೆದ ಸಿಏಎಸ್‌‌ಸಿಇಯ ರಾಷ್ಟ್ರಮಟ್ಟದ ಅಥ್ಲೇಟಿಕ್ಸ್‌‌ನಲ್ಲಿ ಭಾಗವಹಿಸಿ 7 ಚಿನ್ನ, 3 ಬೆಳ್ಳಿ, 2 ಕಂಚು ಸೇರಿದಂತೆ ಒಟ್ಟು 12 ಪದಕ ಪಡೆದರು.

ಎ.ಎಸ್.ಗಗನ್, ದವಲ್ ದೇವಯ್ಯ, ಜನ್ಯ ಬೊಳ್ಳಮ್ಮ, ಕೆ.ಎಂ.ನೀಲಮ್ಮ, ನಿಶ್ಚಲ್ ಗೌಡ, ಆದರ್ಶ್, ಸ್ವಯಂ ಬೋಪಯ್ಯ, ದರ್ಶಲ್ ಸಾಯಿರೆಡ್ಡಿ, ಆರ ಮಿಠಾಯಿ ವಾಲ ಅಥ್ಲೇಟಿಕ್ಸ್ ನಲ್ಲಿ ಪಾಲ್ಗೊಂಡಿದ್ದವರು.

ಜೊತೆಗೆ ನವದೆಹಲಿಯಲ್ಲಿ ನಡೆಯಲಿರುವ ಸಿಐಎಸ್‌‌ಸಿಇ ಮಂಡಳಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ದವಲ್ ದೇವಯ್ಯ, ಸ್ವಯಂ ಬೋಪಯ್ಯ, ನಿಶ್ಚಲ್ ಗೌಡ, ಕೆ.ಎಂ.ನೀಲಮ್ಮ, ಎ.ಎಸ್.ಗಗನ ಅವರು ಎಸ್ ಜಿಏಪ್ ಐ (ಸ್ಕೂಲ್ ಗೇಮ್ ಫೆಡರೇಷನ್ ಆಫ್ ಇಂಡಿಯಾ)ಗೆ ಆಯ್ಕೆಯಾದರು.

ADVERTISEMENT

ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.