ADVERTISEMENT

ಮಡಿಕೇರಿ: ಸ್ಕ್ಯಾನಿಂಗ್ ಕ್ಷೇತ್ರದ ನೂತನ ಆವಿಷ್ಕಾರ

ಕಾರ್ಯಾಗಾರದಲ್ಲಿ 145 ವೈದ್ಯರು ಭಾಗಿ; ಕಾರ್ಯವಿಧಾನಗಳ ಚರ್ಚೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 4:05 IST
Last Updated 14 ಜೂನ್ 2025, 4:05 IST
ಇಂಡಿಯನ್ ರೇಡಿಯೊಲಾಜಿಕಲ್‌ ಮತ್ತು ಇಮೇಜಿಂಗ್ ಅಸೋಸಿಯೇಷನ್‌ನ ಕರ್ನಾಟಕ ಘಟಕದ ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕ್ಷ– ಕಿರಣ ವಿಭಾಗ, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಕೊಡಗು ಶಾಲೆಯ ಸಹಯೋಗದ ವತಿಯಿಂದ ಕಾಲೇಜಿನಲ್ಲಿ ನಡೆದ ರೇಡಿಯೊಲಾಜಿ ಸಮಾವೇಶವನ್ನು ಗಣ್ಯರು ಉದ್ಘಾಟಿಸಿ ವಿದ್ಯಾರ್ಥಿನಿಯರಿಗೆ ಲೇಖನ ಸಾಮಗ್ರಿ ವಿತರಿಸಿದರು
ಇಂಡಿಯನ್ ರೇಡಿಯೊಲಾಜಿಕಲ್‌ ಮತ್ತು ಇಮೇಜಿಂಗ್ ಅಸೋಸಿಯೇಷನ್‌ನ ಕರ್ನಾಟಕ ಘಟಕದ ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕ್ಷ– ಕಿರಣ ವಿಭಾಗ, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಕೊಡಗು ಶಾಲೆಯ ಸಹಯೋಗದ ವತಿಯಿಂದ ಕಾಲೇಜಿನಲ್ಲಿ ನಡೆದ ರೇಡಿಯೊಲಾಜಿ ಸಮಾವೇಶವನ್ನು ಗಣ್ಯರು ಉದ್ಘಾಟಿಸಿ ವಿದ್ಯಾರ್ಥಿನಿಯರಿಗೆ ಲೇಖನ ಸಾಮಗ್ರಿ ವಿತರಿಸಿದರು   

ಮಡಿಕೇರಿ: ಇಂಡಿಯನ್ ರೇಡಿಯೊಲಾಜಿಕಲ್‌ ಮತ್ತು ಇಮೇಜಿಂಗ್ ಅಸೋಸಿಯೇಷನ್‌ನ ಕರ್ನಾಟಕ ಘಟಕದ ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕ್ಷ– ಕಿರಣ ವಿಭಾಗ, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಕೊಡಗು ಶಾಲೆಯ ಸಹಯೋಗದ ವತಿಯಿಂದ ಕಾಲೇಜಿನಲ್ಲಿ ನಡೆದ ರೇಡಿಯೊಲಾಜಿ ಸಮಾವೇಶದಲ್ಲಿ 145 ವೈದ್ಯರು ಭಾಗಿಯಾಗಿದ್ದರು.

ಸಿ.ಟಿ.ಸ್ಕ್ಯಾನಿಂಗ್ ಮೂಲಕ ಹೃದಯಘಾತದ ಮುನ್ಸೂಚನೆ ಅರಿಯುವುದು, ಸ್ಕ್ಯಾನಿಂಗ್ ಮೂಲಕ ಶಿಶು ತಾಯಿ ಗರ್ಭದಲ್ಲಿ ಇರುವಾಗಲೇ ಅಂಗವೈಕಲ್ಯ ತಿಳಿಯುವುದು ಸೇರಿದಂತೆ ಅನೇಕ ಬಗೆಯ ಹೊಸ ಬಗೆಯ ತಂತ್ರಜ್ಞಾನದ ವಿಷಯಗಳನ್ನು ಇಲ್ಲಿ ಚರ್ಚಿಸಲಾಯಿತು. ನೇರವಾಗಿ ಸ್ಕ್ಯಾನಿಂಗ್‌ ಮಾಡುವ ಮೂಲಕ ಪ್ರಾತ್ಯಕ್ಷಿಕೆಯನ್ನೂ ನಡೆಸಲಾಯಿತು.

8 ಮಂದಿ ತಜ್ಞರು ವಿವಿಧ ವಿಷಯಗಳನ್ನು ಕುರಿತು ಮಾತನಾಡಿದರು. ವೈದ್ಯರು ಚರ್ಚೆಯಲ್ಲಿ ಭಾಗಿಯಾಗಿ ತಮ್ಮ ಸಂದೇಹಗಳನ್ನು ಬಗೆಹರಿಸಿಕೊಂಡರು.

ADVERTISEMENT

ಕುಶಾಲನಗರದ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರಿಗೆ ಕೊಡೆ, ಲೇಖನ ಸಾಮಗ್ರಿಗಳು ಹಾಗೂ ನಿಘಂಟನ್ನು ಐಆರ್‌ಐಎ ವತಿಯಿಂದ ವಿತರಿಸಲಾಯಿತು.

ಶಾಸಕ ಡಾ.ಮಂತರ್‌ಗೌಡ ಸಮ್ಮೇಳನ ಉದ್ಘಾಟಿಸಿದರು. ಐಆರ್‌ಐಎ ರಾಜ್ಯ ಘಟಕದ ಅಧ್ಯಕ್ಷ ಡಾ.ಜಿ.ಯು.ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಎ.ಜೆ.ಲೋಕೇಶ್, ಕಾಲೇಜಿನ ಪ್ರಾಂಶುಪಾಲ ಡಾ.ವಿಶಾಲ್‌ಕುಮಾರ್, ವೈದ್ಯಕೀಯ ಅಧೀಕ್ಷಕ ಡಾ.ಸೋಮಶೇಖರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ನಂಜುಂಡಯ್ಯ, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಕಾರ್ಯದರ್ಶಿ ಡಾ.ಎಂ.ಯು.ಚೇತನ್, ಐಎಂಎ ಅಧ್ಯಕ್ಷ ಡಾ.ಶ್ಯಾಂ ಅಪ್ಪಣ್ಣ, ಐಆರ್‌ಐಎ ಕಾರ್ಯದರ್ಶಿ ವಿದ್ಯಾಸಾರಥಿ, ಕೇಂದ್ರ ಸಮಿತಿ ಸದಸ್ಯ ಡಾ.ಮಹೇಶ್, ಮೈಸೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿವೃತ್ತ ಡೀನ್ ಡಾ.ನಂಜರಾಜು ಹಾಗೂ ಡಾ.ರವಿಕಿರಣ್ ಇದ್ದರು.

ಕಾರ್ಯಾಗಾರದಲ್ಲಿ ಶಾಸಕ ಡಾ.ಮಂತರ್‌ಗೌಡ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.