ADVERTISEMENT

ಮಡಿಕೇರಿ | ಸಹಾಯ ಹಸ್ತ ಚಾಚಿದ ಶಾಸಕ ಎ.ಎಸ್.ಪೊನ್ನಣ್ಣ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 7:44 IST
Last Updated 1 ಆಗಸ್ಟ್ 2025, 7:44 IST
<div class="paragraphs"><p>ಶಾಸಕ ಎ.ಎಸ್.ಪೊನ್ನಣ್ಣ ( ಸಂಗ್ರಹ ಚಿತ್ರ)</p></div>

ಶಾಸಕ ಎ.ಎಸ್.ಪೊನ್ನಣ್ಣ ( ಸಂಗ್ರಹ ಚಿತ್ರ)

   

ಮಡಿಕೇರಿ: ತಾಲ್ಲೂಕಿನ ಮೇಕೇರಿ ಗ್ರಾಮದ ಶಕ್ತಿನಗರ ಕಾಲೊನಿಯಲ್ಲಿ ಮನೆ ಹಾನಿಯಾಗಿದ್ದು ಹಾಗೂ ಬರೆ ಕುಸಿದು ತೊಂದರೆಯಲ್ಲಿದ್ದ ಜನರಿಗೆ ಶಾಸಕ ಎ.ಎಸ್.ಪೊನ್ನಣ್ಣ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಟಾರ್ಪಲ್‌ಗಳನ್ನು ವಿತರಿಸಿ ಸಹಾಯ ಹಸ್ತ ಚಾಚಿದ್ದಾರೆ.

ಕಾರ್ಯನಿಮಿತ್ತ ಬೆಂಗಳೂರಿನಲ್ಲಿರುವ ಶಾಸಕರು, ಮುಖಂಡರಾದ ಇಸ್ಮಾಯಿಲ್ ಮುಖಾಂತರ ಸಂತ್ರಸ್ತರಿಗೆ ಟಾರ್ಪಲ್ ವಿತರಿಸಿದ್ದಾರೆ. ಈ ವೇಳೆ ಮುಖಂಡರಾದ ಪೂಜಾರಿರ ಧ್ರುವ, ಹಾಕತ್ತೂರು ಪಿಯೂಷ್ ಪೆರೇರ, ಗ್ರಾಮ ಪಂಚಾಯಿತಿ ಸದಸ್ಯ ಹನೀಫ್, ಬಶೀರ್, ಹ್ಯಾರಿಸ್, ರಫೀಕ್ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.