
ಸೋಮವಾರಪೇಟೆ: ಅಬ್ಬೂರುಕಟ್ಟೆ ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ ಫೆ.22ರಂದು ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 2ಕ್ಕೆ ಶೋಭಾಯಾತ್ರೆಯು ಮಂಗಳೂರಿನ ಭಜನೆ ತಂಡ, ನಾಸಿಕ್ ಬ್ಯಾಂಡ್, ಚಂಡೆ ವಾದ್ಯ ಹಾಗೂ ವೀರಗಾಸೆಯೊಂದಿಗೆ ತಣ್ಣೀರುಹಳ್ಳ ದೇವಸ್ಥಾನದಿಂದ ಅಬ್ಬೂರಕಟ್ಟೆ ಜಂಕ್ಷನ್‌ವರೆಗೆ ನಡೆಯಲಿದೆ.
ಸಂಜೆ 4ಕ್ಕೆ ಮನೇಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮಿ ಸಾನ್ನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೆ.ಎಲ್. ತಿಮ್ಮಯ್ಯ ಕರ್ಕಳ್ಳಿ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ದೋ. ಕೇಶವಮೂರ್ತಿ ಪ್ರಧಾನ ಭಾಷಣ ಮಾಡುವರು.
ಸೋಮೇಶ್ವರ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎನ್.ಪಾಪಯ್ಯ, ನೇರುಗಳಲೆಯ ಆರ್‌ಎಸ್ಎಸ್ ಸ್ವಯಂಸೇವಕ ಪಿ.ಇ.ಚಂದ್ರಾಜು, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ರೂಪಾ ಸತೀಶ್, ಹೊಸಳ್ಳಿ ಕಾವೇರಿ, ಕೊಡಗು ಜಿಲ್ಲಾ ಜೇನುಕುರುಬರ ಸಂಘದ ಅಧ್ಯಕ್ಷ ಜೆ.ಜೆ. ರಮೇಶ್ ಪಾಲ್ಗೊಳ್ಳುವರು ಎಂದು ಅಬ್ಬೂರುಕಟ್ಟೆ ಮಂಡಲ ಹಿಂದೂ ಸಂಗಮ ಸಮಿತಿ ಅಧ್ಯಕ್ಷ ಪಿ.ಡಿ.ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.