
ಎಬಿವಿಪಿ 45ನೇ ಕರ್ನಾಟಕ ದಕ್ಷಿಣ ಪ್ರಾಂತ ಸಮ್ಮೇಳನದಲ್ಲಿ ‘ಬೆಂಗಳೂರು ಹುಡುಗರು’ ಸಂಸ್ಥೆಯ ಸಹಸಂಸ್ಥಾಪಕ ಮನೋಜ್ ನಂದೀಶಪ್ಪ ಅವರಿಗೆ ‘ಯುವ ಪುರಸ್ಕಾರ’ ಪ್ರದಾನ ಮಾಡಲಾಯಿತು.
ಮಡಿಕೇರಿ: ಶುಕ್ರವಾರ ಇಲ್ಲಿ ಸಮಾರೋಪಗೊಂಡ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 45ನೇ ಕರ್ನಾಟಕ ದಕ್ಷಿಣ ಪ್ರಾಂತ ಸಮ್ಮೇಳನದಲ್ಲಿ 2026–27 ನೇ ಸಾಲಿನ ವಿದ್ಯಾರ್ಥಿ ಪರಿಷತ್ ಪ್ರಾಂತ ಕಾರ್ಯಕಾರಿಣಿ ರಚಿಸಲಾಯಿತು.
ಅಧ್ಯಕ್ಷರಾಗಿ ರವಿ ಮಂಡ್ಯ, ಕಾರ್ಯದರ್ಶಿಯಾಗಿ ಗೋಪಿ ರಂಗಸ್ವಾಮಿ, ಸಹ ಕಾರ್ಯದರ್ಶಿಯಾಗಿ ಎಚ್.ಬಿ.ಪ್ರಜ್ವಲ್, ಯಶವಂತ್, ದಿವ್ಯಾ, ಸುಧಾ ಶೆಣೈ, ಸುವಿತ್ ಶೆಟ್ಟಿ ಅವರು ಆಯ್ಕೆಯಾದರು.
‘ಬೆಂಗಳೂರು ಹುಡುಗರು’ ಸಂಸ್ಥೆಯ ಸಹ ಸಂಸ್ಥಾಪಕ ಮನೋಜ್ ನಂದೀಶಪ್ಪ ಅವರಿಗೆ ‘ಮೀಡಿಯಾ ಮಾಸ್ಟರ್ ಯೂಟೂಬ್ ಚಾನೆಲ್‌ನ ಎಂ.ಎಸ್.ರಾಘವೇಂದ್ರ ಅವರು ಯುವ ಪುರಸ್ಕಾರವನ್ನು ಪ್ರದಾನ ಮಾಡಿದರು.
ಸಮ್ಮೇಳನದ ಒತ್ತಾಯಗಳು: ರಾಜ್ಯದಲ್ಲಿ ಎಲ್ಲ ವಿಶ್ವವಿದ್ಯಾಲಯಗಳಿಗೆ ಮೂಲ ಸೌಕರ್ಯ ಒದಗಿಸಿ ಸದೃಢಗೊಳಿಸಬೇಕು, ಪ್ರಾದೇಶಿಕ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ಹೂಡಿಕೆ ನೀತಿಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಹಾಗೂ ಉದ್ಯೋಗಾವಕಾಶಗಳನ್ನು ಒದಗಿಸುವ ಯಾವುದೇ ಹೂಡಿಕೆ ಕೈ ತಪ್ಪದಂತೆ ನೋಡಿಕೊಳ್ಳಬೇಕು, ಕಲಿಕೆಯ ಪ್ರಾಥಮಿಕ ಹಂತದಲ್ಲೇ ಕೃತಕ ಬುದ್ಧಿಮತ್ತೆ ಪರಿಚಯಿಸಬೇಕು. ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಗುಣಮಟ್ಟದ ಎಐ ಆಧಾರಿತ ಶೈಕ್ಷಣಿಕ ಪರಿಕರಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.