ADVERTISEMENT

ರಾಜರಾಜೇಶ್ವರಿ ಶಾಲಾ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 13:17 IST
Last Updated 11 ಡಿಸೆಂಬರ್ 2023, 13:17 IST
ಈಚೆಗೆ ಆಯೋಜಿಸಲಾದ ಕರಾಟೆ ಪರೀಕ್ಷೆಯಲ್ಲಿ ಪದಕ ಮತ್ತು ವಿವಿಧ ಬೆಲ್ಟ್ ಗಳನ್ನು ಪಡೆದುಕೊಂಡ ನಾಪೋಕ್ಲು ಸಮೀಪದ ಚೇರಂಬಾಣೆಯ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು.
ಈಚೆಗೆ ಆಯೋಜಿಸಲಾದ ಕರಾಟೆ ಪರೀಕ್ಷೆಯಲ್ಲಿ ಪದಕ ಮತ್ತು ವಿವಿಧ ಬೆಲ್ಟ್ ಗಳನ್ನು ಪಡೆದುಕೊಂಡ ನಾಪೋಕ್ಲು ಸಮೀಪದ ಚೇರಂಬಾಣೆಯ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು.   

ನಾಪೋಕ್ಲು: ಇಲ್ಲಿಗೆ ಸಮೀಪದ ಚೇರಂಬಾಣೆಯ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಈಚೆಗೆ ಆಯೋಜಿಸಲಾದ ಕರಾಟೆ ಪರೀಕ್ಷೆಯಲ್ಲಿ ಪದಕ ಮತ್ತು ವಿವಿಧ ಬೆಲ್ಟ್ ಗಳನ್ನು ಪಡೆದುಕೊಂಡರು.

ಅಂತರರಾಷ್ಟ್ರೀಯ ಶಾವೊಲಿನ್ ಕುಂಗ್-ಫು ಕರಾಟೆ ಶಾಲೆಯಿಂದ ನಡೆಸಲಾದ ಕರಾಟೆ ಪರೀಕ್ಷೆಯಲ್ಲಿ 47 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಶಾಲೆಯ ಮುಖ್ಯ ಶಿಕ್ಷಕ ಕುದುಪಜೆ ಕವನ್ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪದಕ ಮತ್ತು ವಿವಿಧ ರೀತಿಯ ಕರಾಟೆ ಬೆಲ್ಟ್‌‌‌‌‌ಗಳನ್ನು ವಿತರಿಸಿದರು. ಕರಾಟೆ ಶಾಲೆಯ ಭಾರತದ ಮುಖ್ಯ ತರಬೇತುದಾರ ದೇವರಾಜ್, ಕರ್ನಾಟಕ ತರಬೇತುದಾರ ಹಾಗೂ ರಾಜರಾಜೇಶ್ವರಿ ಪ್ರೌಢಶಾಲೆಯ ಕರಾಟೆ ಶಿಕ್ಷಕ ನಾಟೋಳಂಡ ನಂಜುಂಡ, ಜಿಲ್ಲಾ ತರಬೇತುದಾರರಾದ ವೇಣು ಮತ್ತು ಸತೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT