ನಾಪೋಕ್ಲು: ಇಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪಟ್ಟಣದ ಅಂಗಡಿಗಳಿಗೆ ತೆರಳಿ ತೆರಿಗೆ ಪಾವತಿಸುವಂತೆ ಸೂಚಿಸಲಾಯಿತು.
ಅಂಗಡಿಗಳಲ್ಲಿ ದಾಖಲೆಪತ್ರ ಪರಿಶೀಲಿಸಿ ತೆರಿಗೆ ಪಾವತಿಸದ ಹಾಗೂ ಲೈಸನ್ಸ್ ಪಡೆಯದ ಮಾಲೀಕರಿಗೆ ಮಾಹಿತಿ ನೀಡಿ ಜುಲೈ 22ರೊಳಗೆ ಪಾವತಿಸುವಂತೆ ತಿಳಿಸಲಾಯಿತು.
ಪಂಚಾಯಿತಿ ವ್ಯಾಪ್ತಿಯ ಅಂಗಡಿ ಮಳಿಗೆಗಳ ತೆರಿಗೆ ಹಾಗೂ ಪರವಾನಗಿ ನವೀಕರಿಸದ, ಪಡೆಯದ ಮಾಲೀಕರ ಮಳಿಗೆಗಳಿಗೆ ಬೀಗವನ್ನು ಹಾಕಿ, ಕಾನೂನು ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
ಗ್ರಾಮ ಪಂಚಾಯಿತಿ ಪಿಡಿಒ ಚೋಂದಕ್ಕಿ, ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾ ಅರುಣ್, ಸದಸ್ಯರಾದ ಕನ್ನಂಭೀರ ಸುದೀ ತಿಮ್ಮಯ್ಯ, ಮಾಚೇಟಿರ ಕುಸು ಕುಶಾಲಪ್ಪ ಪ್ರತೀಪ ಬಿ.ಎಂ., ಬೊಪ್ಪಂಡ ವೇಣು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.