ADVERTISEMENT

ಕುಶಾಲನಗರ: ಚೌಡೇಶ್ವರಿ ಅಮ್ಮನವರ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 4:49 IST
Last Updated 10 ಜೂನ್ 2025, 4:49 IST
ಕುಶಾಲನಗರದ ರಾಮಲಿಂಗ ಚೌಡೇಶ್ವರಿ ಅಮ್ಮನವರ ವಾರ್ಷಿಕೋತ್ಸವ ಸೋಮವಾರ ಶ್ರದ್ಧಾಭಕ್ತಿಯಿಂದ ನಡೆಯಿತು 
ಕುಶಾಲನಗರದ ರಾಮಲಿಂಗ ಚೌಡೇಶ್ವರಿ ಅಮ್ಮನವರ ವಾರ್ಷಿಕೋತ್ಸವ ಸೋಮವಾರ ಶ್ರದ್ಧಾಭಕ್ತಿಯಿಂದ ನಡೆಯಿತು    

ಕುಶಾಲನಗರ: ಪಟ್ಟಣದ ರಥಬೀದಿಯಲ್ಲಿರುವ  ರಾಮಲಿಂಗ ಚೌಡೇಶ್ವರಿ ಅಮ್ಮನವರ ವಾರ್ಷಿಕೋತ್ಸವ ಸೋಮವಾರ ವಿಜೃಂಭಣೆಯೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು.

ಚೌಡೇಶ್ವರಿ ದೇವಸ್ಥಾನ, ದೇವಾಂಗ ಸಂಘದ ವತಿಯಿಂದ ಆಯೋಜಿಸಿದ್ದ ವಾರ್ಷಿಕೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿವಿಧ ಹೋಮ ಹವನ ಸೇರಿದಂತೆ ಪೂಜಾ ಕೈಂಕರ್ಯ ನಡೆದವು. ಬೆಳಿಗ್ಗೆ 5 ಗಂಟೆಗೆ ಗಣಪತಿ ಹೋಮ, ಧ್ವಜಾರೋಹಣ ಜರುಗಿತು. ನಂತರ ಸಮುದಾಯದ ಭಾಂಧವರು ಕಾವೇರಿ ನದಿಗೆ ತೆರೆಳಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಿದರು. ಮಹಿಳೆಯರು ಪೂರ್ಣಕುಂಭ ಕಳಸ ಹೊತ್ತ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ನಡೆಸಿದರು. ಜಾನಪದ ವೀರಗಾಸೆ ವೀರಭದ್ರೇಶ್ವರ ಕುಣಿತ ಮೆರವಣಿಗೆಗೆ ಮೆರುಗು ನೀಡಿತು.

ಮಧ್ಯಾಹ್ನ12 ಗಂಟೆಗೆ ದೇವಾಲಯದಲ್ಲಿ ದೇವಿಗೆ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಿತು. ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಅನ್ನಸಂರ್ತಪಣೆ ಕಾರ್ಯಕ್ರಮ ನಡೆಯಿತು. ಪೂಜಾ ಕೈಂಕರ್ಯಗಳು ದೇವಸ್ಥಾನದ ಅರ್ಚಕ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ನಡೆಯಿತು.

ADVERTISEMENT

ಸಂಜೆ 6 ಗಂಟೆಗೆ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಉತ್ಸವ ಮೆರವಣಿಗೆಗೆ ಚಾಲನೆ ನೀಡಲಾಯಿತು.ವೀರಗಾಸೆ ನೃತ್ಯ, ಮಂಗಳವಾದ್ಯದೊಂದಿಗೆ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ದೇವಾಲಯದ ಆವರಣದಿಂದ ಆರಂಭಗೊಂಡು ಬೈಚನಹಳ್ಳಿ ವರೆಗೆ ಸಾಗಿತು. ಮೆರವಣಿಗೆ ಸಂದರ್ಭದಲ್ಲಿ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನ ನಡೆಯಿತು.

ದೇವಾಂಗ ಸಂಘದ ಅಧ್ಯಕ್ಷ ಡಿ.ವಿ. ರಾಜೇಶ್, ಉಪಾಧ್ಯಕ್ಷ ಡಿ.ವಿ. ಚಂದ್ರು, ಪ್ರಧಾನ ಕಾರ್ಯದರ್ಶಿ ಡಿ.ಆರ್. ಕೃಷ್ಣಕುಮಾರ್, ಖಜಾಂಚಿ ಡಿ.ಜಿ. ಪ್ರದೀಪ್, ಸಹ ಕಾರ್ಯದರ್ಶಿ ಡಿ. ವಿ. ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಡಿ. ಎನ್. ವಿನೋದ್, ಜಂಟಿ ಕಾರ್ಯದರ್ಶಿ ಡಿ. ಆರ್. ಜಯಂತ್ , ಗೌರವ ಸಲಹೆಗಾರರಾದ ಡಿ.ಟಿ. ವಿಜಯೆಂದ್ರ, ಡಿ.ಎಸ್. ಕೋದಂಡರಾಮ, ಡಿ.ಟಿ. ನಾಗ್ರೇಂದ್ರ, ಡಿ.ಕೆ. ತಿಮ್ಮಪ್ಪ, ಡಿ.ಸಿ. ಜಗದೀಶ್, ಡಿ.ಸಿ. ಪ್ರಭಾಕರ್, ಎಚ್. ಎನ್. ಯೋಗೇಶ್, ಮಹಿಳಾ ಘಟಕದ ಪ್ರಮುಖರಾದ ಪದ್ಮಮಹೇಶ್, ಶುಭ ರವಿಕುಮಾರ್, ರೂಪ ಕುಮಾರ್, ಶೋಭಾ ಅನಿಲ್, ಗೀತಾ ಸೋಮಶೇಖರ್, ಶೋಭ ಸೋಮಶೆಟ್ಟಿ, ಯುವಕ ಸಂಘದ ಡಿ.ಎಸ್. ಯತೀರಾಜ್, ಡಿ.ಪಿ.ಮಧು, ಡಿ. ಪಿ.ಗಣೇಶ್, ಡಿ.ಟಿ. ರವಿಶಂಕರ್, ಸೇರಿದಂತೆ ಸಮಿತಿಯ ನಿರ್ದೇಶಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.