ADVERTISEMENT

23ರಂದು ಇಗ್ಗುತಪ್ಪ ದೇವರ ಕುಂಬ್ಯಾರ್ ಕಲಾಡ್ಚ ವಾರ್ಷಿಕೋತ್ಸವ  

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 2:40 IST
Last Updated 12 ಮಾರ್ಚ್ 2024, 2:40 IST

ನಾಪೋಕ್ಲು: ಸಮೀಪದ ಕಕ್ಕಬ್ಬೆಯ ಪಾಡಿ ಇಗ್ಗುತಪ್ಪ ದೇವರ ಕುಂಬ್ಯಾರ್ ಕಲಾಡ್ಚ ವಾರ್ಷಿಕೋತ್ಸವವು ಮಾರ್ಚ್ 23ರಂದು ವಿಜೃಂಭಣೆಯಿಂದ ನಡೆಯಲಿದೆ.

ಮಾರ್ಚ್ 23ರಂದು ದೇವತಕ್ಕರಾದ ಪರದಂಡ ಕುಟುಂಬಸ್ಥರು ಹಾಗೂ ಬಟ್ಯತ್ ವಕ್ಕ ಪೇರಿಯಂಡ ಕುಟುಂಬಸ್ಥರ ಹಾಗೂ ಸಂಬಂಧಪಟ್ಟ ಇತರ ಕುಟುಂಬಸ್ಥರ ಜೋಡೆತ್ತು ಪೋರಾಟ, ಪಾಲ್ ಬೈಯ್ಯಾಡ್‌ನೊಂದಿಗೆ ಶಾಸ್ತ್ರೋಕ್ತವಾಗಿ ಕಲಾಡ್ಚ ಹಬ್ಬ ಆರಂಭವಾಗುವುದು. ಮಧ್ಯಾಹ್ನ ನಿತ್ಯ ಪೂಜೆಯೊಂದಿಗೆ ಪ್ರಸಾದವಿತರಣೆ, ಅನ್ನ ಸಂತರ್ಪಣೆ ನೆರವೇರಲಿದೆ.

ನಂತರ ಚಂಡೆ ಮದ್ದಳೆಯೊಂದಿಗೆ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಆದಿಸ್ಥಾನ ಮಲ್ಮಗೆ ಕೊಂಡೊಯ್ಯುವರು. ಅಲ್ಲಿ ಸಾಂಪ್ರದಾಯಿಕ ದುಡಿಕೊಟ್ಟ್ ಪಾಟ್‌ನೊಂದಿಗೆ ಪಾಡಿ, ನೆಲಜಿ, ಪೇರೂರಿನ ತಕ್ಕ ಮುಖ್ಯಸ್ಥರು ಸೇರಿ ಎತ್ತ್ ಪೋರಾಟ ಸೇವೆ, ಪಾಲ್ ಬೈಯ್ಯಾಡ್‌ನ ಪಾಯಸ ಮಾಡಿ ಪ್ರಸಾದವಾಗಿ ಅರ್ಪಿಸುವರು. ಮುಸ್ಸಂಜೆ ವೇಳೆಗೆ ವಿವಿಧ ಪೂಜಾ ಕೈಂಕರ್ಯದೊಂದಿಗೆ ಉತ್ಸವಮೂರ್ತಿಯನ್ನು ಪಾಡಿ ದೇವಾಲಯಕ್ಕೆ ತಂದು ದೇವಾಲಯದಲ್ಲಿ ಉತ್ಸವ ಮೂರ್ತಿಯನ್ನು ಹೊತ್ತು ನೃತ್ಯ ಮಾಡುವ ಮೂಲಕ ಉತ್ಸವಕ್ಕೆ ತೆರೆ ಬೀಳುವುದು.

ADVERTISEMENT

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಭಕ್ತ ಜನಸಂಘದ ಪದಾಧಿಕಾರಿಗಳು ಹಾಗೂ ತಕ್ಕ ಮುಖ್ಯಸ್ಥರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.