ADVERTISEMENT

ಶಾಸ್ತಾವು ದೇವಸ್ಥಾನ: ವಾರ್ಷಿಕ ಜಾತ್ರೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 14:03 IST
Last Updated 28 ಮಾರ್ಚ್ 2024, 14:03 IST
ಪೆರಾಜೆ ಗ್ರಾಮದ ಶಾಸ್ತಾವು ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯ ಅಂಗವಾಗಿ ದೇವರ ದರ್ಶನ ಬಲಿ ನಡೆಯಿತು
ಪೆರಾಜೆ ಗ್ರಾಮದ ಶಾಸ್ತಾವು ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯ ಅಂಗವಾಗಿ ದೇವರ ದರ್ಶನ ಬಲಿ ನಡೆಯಿತು   

ನಾಪೋಕ್ಲು: ಪೆರಾಜೆ ಗ್ರಾಮದ ಶಾಸ್ತಾವು ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ವಿಜೃಂಭಣೆಯಿಂದ ನೆರವೇರಿತು.

ಜಾತ್ರೆಯ ಅಂಗವಾಗಿ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ಪ್ರಸಾದ ವಿತರಣೆ ನಡೆಯಿತು. ತುಳು ಕೋಲದ ಬೆಳ್ಳಾಟ, ಬೇಟೆ ಕರಿ ಮಗನ್ ಈಶ್ವರನ್ ಬೆಳ್ಳಾಟ, ತುಳುಕೋಲ ತಿರುವಪ್ಪಗಳು ನಡೆದವು.

ಜಾತ್ರೆಯ ಸಂದರ್ಭದಲ್ಲಿ ಗ್ರಾಮದ ಭಕ್ತರು ಸೇರಿ ದೇವರ ನೃತ್ಯ ಬಲಿ ವೀಕ್ಷಿಸಿದರು.

ADVERTISEMENT

ದೇವಸ್ಥಾನದ ಮುಕ್ತೆಸರ ಜಿತೇಂದ್ರ ನಿಡ್ಯ ಮಲೆ, ಕಾರ್ಯದರ್ಶಿ ತೇಜ ಪ್ರಸಾದ್ ಅಮೆಚೂರ್, ದೇವತಕ್ಕ ರಾಜಗೋಪಾಲ ರಾಮಕಜೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.