ನಾಪೋಕ್ಲು: ಸಮೀಪದ ನೆಲಜಿ ಗ್ರಾಮದ ನೆಲಜಿ ಇಗ್ಗುತಪ್ಪ ದೇವರ ವಾರ್ಷಿಕ ಕಲಾಡ್ಚ ಹಬ್ಬವು ಮಾರ್ಚ್ 23ರಂದು ಶನಿವಾರ ನಡೆಯಲಿದೆ.
ಹಬ್ಬದ ಪ್ರಯುಕ್ತ ದೇವಸ್ಥಾನದಲ್ಲಿ ಭಕ್ತರ ತುಲಾಭಾರ ಸೇವೆ, ಮಹಾಪೂಜೆ, ಎತ್ತು ಪೋರಾಟ, ದೇವರ ನೃತ್ಯಬಲಿ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ತಕ್ಕ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.