
ಪ್ರಜಾವಾಣಿ ವಾರ್ತೆ
ಸೋಮವಾರಪೇಟೆ: ಪೊಲೀಸರಿಂದ ವಾಹನ ಸವಾರರಿಗೆ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಕಾರ್ಯಾಗಾರ ಸೋಮವಾರ ನಡೆಯಿತು.
ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುತ್ತಿದ್ದ ಸವಾರರನ್ನು ಒಂದೆಡೆಗೆ ಸೇರಿಸಿ, ಅವರಿಗೆ ಸಂಚಾರ ನಿಯಮಗಳ ಕುರಿತು ಠಾಣಾಧಿಕಾರಿ ರಮೇಶ್ ಕುಮಾರ್ ಮಾರ್ಗದರ್ಶನ ನೀಡಿದರು.
ವಾಹನ ಸವಾರರು ಮತ್ತು ಪಾದಚಾರಿಗಳು ಅವಘಡ ಸಂಭವಿಸದಂತೆ ಸುರಕ್ಷತೆ ಹಾಗೂ ಕಟ್ಟುನಿಟ್ಟಾಗಿ ಸಂಚಾರ ನಿಯಮ ಪಾಲಿಸಬೇಕೆಂದು ಸವಾರರಿಗೆ ತಿಳಿ ಹೇಳಿದರು.
ದುರ್ಘಟನೆ ಸಂಭವಿಸಿದ ನಂತರ ಪಶ್ಚಾತಾಪ ಪಡುವ ಬದಲು ಪ್ರತಿನಿತ್ಯ ಸುರಕ್ಷಿತ ವಿಧಾನ ಅನುಸರಿಸಿ, ತಮ್ಮ ಜವಾಬ್ದಾರಿ ನಿರ್ವಹಿಸುವಂತೆ ಹೇಳಿದರು. ಇದೇ ಸಂದರ್ಭ ನಿಯಮ ಪಾಲಿಸದ ಬೈಕ್, ಸ್ಕೂಟರ್, ಆಟೋ ಚಾಲಕರಿಂದ ದಂಡ ವಸೂಲಾತಿ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.