ಮಡಿಕೇರಿ: ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ದಿಶಾ ಎಕ್ಸಿಪಿರಿಯನ್ಷಲ್ ಲರ್ನಿಂಗ್ ವತಿಯಿಂದ ಭಗವದ್ಗೀತೆ ಕಲಿಕಾ ಕೋರ್ಸ್ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಆರಂಭಗೊಂಡಿತು.
ಒಟ್ಟು 6 ತಿಂಗಳ ಈ ಕೋರ್ಸ್‌ನಲ್ಲಿ 25 ಜನರ ಕಲಿಕಾ ತಂಡವು ಮುಂದಿನ ವರ್ಷ ಮಾರ್ಚ್ ತಿಂಗಳವರೆಗೆ ತಿಂಗಳಿಗೊಂದರಂತೆ ತರಗತಿಗಳಲ್ಲಿ ಭಾಗವಹಿಸಲಿದೆ. ದಿಶಾ ತರಬೇತುದಾರರಾದ ಪ್ರೀತಮ್ ಪೊನ್ನಪ್ಪ ಹಾಗೂ ಕುಸುಮ್ ಟಿಟೊ ಮಹಾಭಾರತ ಕಥೆಯ ಮೂಲಕ ಈ ಕೋರ್ಸ್ ಅನ್ನು ಆರಂಭಿಸಿದರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.