ವಿರಾಜಪೇಟೆ: ಇಲ್ಲಿನ ಕೆನರಾ ಬ್ಯಾಂಕ್ ಶಾಖೆಯ ವತಿಯಿಂದ ಈಚೆಗೆ ಪತ್ರಿಕಾ ವಿತರಕರಿಗೆ ರೈನ್ ಕೋಟ್ ವಿತರಿಸಲಾಯಿತು.
ಬ್ಯಾಂಕ್‌ನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಾಖೆಯ ಮುಖ್ಯ ವ್ಯವಸ್ಥಾಪಕಿ ಭಾನುಮತಿ ಅವರು ಪತ್ರಿಕಾ ವಿತರಕರಿಗೆ ರೈನ್ ಕೋಟ್ ವಿತರಿಸಿದರು.
ಬಳಿಕ ಮಾತನಾಡಿದ ಅವರು, ‘ಪತ್ರಿಕೆಗಳಿಗೆ ವಿತರಕರು ಜೀವಾಳ. ಪ್ರಸ್ತುತ ತಂತ್ರಜ್ಞಾನದಿಂದಾಗಿ ಸಾಮಾಜಿಕ ಜಾಲತಾಣದ ಮೂಲಕ ಅನೇಕ ಸುದ್ದಿಗಳು ಸಮಾಜಕ್ಕೆ ತಲುಪುತ್ತಿವೆ. ಇದರಿಂದ ಪತ್ರಿಕೆಗಳನ್ನು ಖರೀದಿಸಿ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇಂತಹ ಸನ್ನಿವೇಶದಲ್ಲಿಯೂ ಮಳೆಗಾಳಿ ಲೆಕ್ಕಿಸದೆ ಪತ್ರಿಕೆಗಳನ್ನು ಮನೆಮನೆ ತಲುಪಿಸುವ ಕಾರ್ಯವನ್ನು ಪತ್ರಿಕಾ ವಿತರಕರು ಮಾಡುತ್ತಿದ್ದಾರೆ’ ಎಂದರು.
ಕೆನರಾ ಬ್ಯಾಂಕ್ ವಿರಾಜಪೇಟೆ ಶಾಖೆಯ ಸಿಬ್ಬಂದಿ, ಪತ್ರಿಕಾ ವಿತರಕರಾದ ಅಬ್ದುಲ್ ರೆಹಮಾನ್, ದೀಪಕ್ ದಾಸ್, ಕಿಶೋರ್ ಕುಮಾರ್ ಶೆಟ್ಟಿ, ಅಬ್ದುಲ್ಲಾ, ವಿನು, ರಾಜೀವ್ ಮತ್ತು ಟಿ.ಎಂ ಶರೀಫ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.