ADVERTISEMENT

ರಕ್ತಕ್ಕೆ ಪರ್ಯಾಯವಿಲ್ಲ: ಅರಣ್ಯಾಧಿಕಾರಿ ದಿನೇಶ್

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 5:06 IST
Last Updated 12 ಜೂನ್ 2025, 5:06 IST
ಸೋಮವಾರಪೇಟೆ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರವನ್ನು ಪುಷ್ಪಗಿರಿ ವನ್ಯಜೀವಿ ವಲಯದ ಅರಣ್ಯಾಧಿಕಾರಿ ದಿನೇಶ್ ಉದ್ಘಾಟಿಸಿದರು 
ಸೋಮವಾರಪೇಟೆ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರವನ್ನು ಪುಷ್ಪಗಿರಿ ವನ್ಯಜೀವಿ ವಲಯದ ಅರಣ್ಯಾಧಿಕಾರಿ ದಿನೇಶ್ ಉದ್ಘಾಟಿಸಿದರು    

ಸೋಮವಾರಪೇಟೆ: ‘ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ರಕ್ತಕ್ಕೆ ಪರ್ಯಾಯವಾಗಿ ಯಾವುದನ್ನೂ ತಯಾರಿಸಲು ಸಾಧ್ಯವಾಗಿಲ್ಲ. ಆದುದ್ದರಿಂದ ರಕ್ತದಾನಿಗಳೇ ಇಲ್ಲಿ ಪ್ರಮುಖವಾಗಿದೆ’ ಎಂದು ಪುಷ್ಪಗಿರಿ ವನ್ಯಜೀವಿ ವಲಯದ ಅರಣ್ಯಾಧಿಕಾರಿ ದಿನೇಶ್ ಹೇಳಿದರು.

ಇಲ್ಲಿನ ಮಹಿಳಾ ಸಮಾಜದ ಆವರಣದಲ್ಲಿ ತಥಾಸ್ತು ಸಾತ್ವಿಕ ಸಂಸ್ಥೆ, ಅಬಕಾರಿ ಇಲಾಖೆ, ಅರಣ್ಯ ಇಲಾಖೆಯ ಪುಷ್ಪಗಿರಿ ವನ್ಯಜೀವಿ ವಲಯ, ಬಸವ ಬಳಗದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೆಲವು ಅಪಘಾತ, ಅನಾರೋಗ್ಯ ಮುಂತಾದ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿರುತ್ತದೆ. ಆದ್ದರಿಂದ ಆರೋಗ್ಯವಂತರು ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಹಲವು ಜೀವಗಳನ್ನು ಉಳಿಸಲು ಸಾಧ್ಯ’ ಎಂದರು.

ADVERTISEMENT

ಮಡಿಕೇರಿ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಮಾತನಾಡಿ, ‘ಇಂದಿಗೂ ಜನರಲ್ಲಿ ರಕ್ತದಾನ ಬಗ್ಗೆ ಅಪನಂಬಿಕೆ ಇದ್ದು, ರಕ್ತದಾನ ಮಾಡಲು ಹಿಂಜರಿಯುತಿರುವುದು ಹಾಗೂ ಮೂಡ ನಂಬಿಕೆಗೆ ಒಳಗಾಗುತ್ತಿರುವುದು ರಕ್ತದ ಸಮಸ್ಯೆ ಇಂದಿಗೂ ಇದೆ. ಆರೋಗ್ಯವಂತರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಕೊಡಗು ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆರಂಭವಾದ ನಂತರ ರಕ್ತದ ಬೇಡಿಕೆ ಹೆಚ್ಚಾಗಿದೆ. ಆದರೆ, ರಕ್ತ ಸಂಗ್ರಹಣೆ ಸಾಕಷ್ಟು ಪ್ರಮಾಣದಲ್ಲಿ ಆಗುತ್ತಿಲ್ಲಾ. ನಗರ ಪ್ರದೇಶಗಳಲ್ಲಿ ಎರಡು, ಮೂರು ರಕ್ತನಿಧಿ ಘಟಕಗಳಿದ್ದು, ರಕ್ತದ ಕೊರತೆಯನ್ನು ನೀಗುತ್ತಿದ್ದಾರೆ. ಆದರೆ, ಜಿಲ್ಲೆಯಲ್ಲಿ ಏಕಮಾತ್ರ ರಕ್ತ ನಿಧಿಕೇಂದ್ರ ಇರುವುದರಿಂದ ರಕ್ತದ ಕೊರತೆ ಹೆಚ್ಚಾಗಿದೆ’ ಎಂದರು.

ಅಬಕಾರಿ ಇನ್‌ಸ್ಪೆಕ್ಟರ್‌ ಲೋಕೇಶ್ ಮಾತನಾಡಿ, ‘ರಕ್ತದಾನ ಶಿಬಿರಗಳಲ್ಲಿ ದಾನಿಗಳಿಂದ ಹೆಚ್ಚಿನ ಸ್ಪಂದನೆಯ ಅಗತ್ಯ ಇದೆ. ಸ್ವಯಂ ಪ್ರೇರಿತ ರಕ್ತದಾನ ಮಾಡಲು ಜನವು ಮುಂದಾಗಬೇಕು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಥಾಸ್ತು ಸಂಸ್ಥೆಯ ಅಧ್ಯಕ್ಷ ಉದಯ ಮಾಳವ ವಹಿಸಿದ್ದರು. ಸಂಸ್ಥೆಯ ಶಿವಕುಮಾರ್, ರೂಪ ಕಾಳಪ್ಪ, ಜನಾರ್ದನ್, ಗಣೇಶ್ ಮರಗೋಡು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.