ADVERTISEMENT

ಆವಿಷ್ಕಾರ, ನಾವೀನ್ಯತೆ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 7:36 IST
Last Updated 4 ಡಿಸೆಂಬರ್ 2025, 7:36 IST
<div class="paragraphs"><p>ಹಣ </p></div>

ಹಣ

   

ಹಣ

ಮಡಿಕೇರಿ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ಪ್ರೊ.ಯು.ಆರ್.ರಾವ್ ಪುರಸ್ಕಾರ, ಡಾ.ಎಸ್.ಕೆ.ಶಿವಕುಮಾರ್ ಪುರಸ್ಕಾರ ಹಾಗೂ ಪ್ರೊ.ಎಸ್.ಅಯ್ಯಪ್ಪನ್ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ADVERTISEMENT

ವಿಜ್ಞಾನ ಮತ್ತು ತಂತ್ರಜ್ಞಾನ ಅಥವಾ ಆರ್ಥಿಕತೆಯ ಯಾವುದೇ ವಿಭಾಗದಿಂದ ಮೂಡಿದ ಜನಸಾಮಾನ್ಯರ ಅದರಲ್ಲೂ ಗ್ರಾಮೀಣ ಪ್ರದೇಶದ ಜನಜೀವನವನ್ನು ಪರಿವರ್ತಿಸಲು ಸಹಾಯಕವಾದ ಅಥವಾ ಉದ್ಯಮಗಳು ಹಾಗೂ ಉದ್ಯೋಗ ಸೃಷ್ಟಿಗೆ ಕಾರಣವಾದ ಅನುಕರಣೀಯ ಆವಿಷ್ಕಾರಗಳು, ಪರಿಹಾರಗಳನ್ನು ಪ್ರತಿ ವರ್ಷ ಗುರುತಿಸಿ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಗೂ ಬೋಧಕರಿಗೆ ಮತ್ತು ಜನಸಾಮಾನ್ಯರಿಗೆ ಈ ಪುರಸ್ಕಾರ ನೀಡಲಾಗುತ್ತದೆ. ಪುರಸ್ಕಾರ ₹ 10 ಸಾವಿರ ನಗದನ್ನು ಒಳಗೊಂಡಿದೆ.

ಆಸಕ್ತರು ಡಿ. 31ರೊಳಗೆ ಅಕಾಡೆಮಿಯ ವೆಬ್‍ಸೈಟ್‍ನಲ್ಲಿ https://kstacademy.in ನೀಡಿರುವ ಮಾರ್ಗಸೂಚಿಯನ್ವಯ ಆನ್‍ಲೈನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.  ಹಿತಿಗೆ ಶ್ರೀನಿವಾಸು  ಅವರನ್ನು ಮೊ: 9620767819 ಮೂಲಕ ಸಂಪರ್ಕಿಸಬಹುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ಆನಂದ್ ‍ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.