ಶನಿವಾರಸಂತೆ: ಇಲ್ಲಿನ ಮಾಜಿ ಸೈನಿಕರ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ಶುಕ್ರವಾರ ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಯಿತು.
ಸಂಘದ ಕಚೇರಿ ಮುಂಭಾಗದ ಧ್ವಜಸ್ತಂಭದ ಮುಂಭಾಗದಲ್ಲಿ ಅಳವಡಿಸಿದ ಕಾರ್ಗಿಲ್ ಯದ್ದದ ಲಾಂಛನಕ್ಕೆ ಗೌರವ ಸಮರ್ಪಿಸಲಾಯಿತು. ಕಾರ್ಗಿಲ್ ಯುದ್ದದಲ್ಲಿ ಮಡಿದ ಯೋಧರಿಗೆ ಸ್ಮರಣಾರ್ಥವಾಗಿ ಪುಷ್ಪ ನಮನ ಸಮರ್ಪಿಸಲಾಯಿತು. ಈ ವೇಳೆ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಮಹೇಶ್ ದಿನದ ಮಹತ್ವ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಪಿ.ಎನ್.ಗಂಗಾಧರ್, ಕಾರ್ಯದರ್ಶಿ ಎಸ್.ಎನ್.ಪಾಂಡು, ಮಾಜಿ ಸೈನಿಕರ ಸಂಘದ ಎಚ್.ಎಸ್.ಆನಂದ್, ಟಿ.ಎಸ್.ನಾಗರಾಜ್, ಮಹೇಶ್, ಬಿ.ಡಿ.ಪರಮೇಶ್, ಕೆ.ಡಿ.ಚಂದ್ರಪ್ಪ, ಕೆ.ವಿ.ಮಂಜುನಾಥ್, ಕೆ.ಪಿ.ತಿಮ್ಮಯ್ಯ, ಚಿದುಕುಮಾರ್ ಮತ್ತು ನಿವೃತ್ತ ಸೈನಿಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.