ADVERTISEMENT

‘ಮಕ್ಕಳನ್ನು ಜಂಕ್ ಫುಡ್‌ಗಳಿಂದ, ಮೊಬೈಲ್‌ಗಳಿಂದ ರಕ್ಷಿಸಿ’

ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 4:35 IST
Last Updated 15 ನವೆಂಬರ್ 2025, 4:35 IST
ಮಡಿಕೇರಿಯ ಪುಟಾಣಿ ನಗರದ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆ ಆಚರಿಸಲಾಯಿತು
ಮಡಿಕೇರಿಯ ಪುಟಾಣಿ ನಗರದ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆ ಆಚರಿಸಲಾಯಿತು   

ಮಡಿಕೇರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆ ನಡೆಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಕುಮಾರ್, ಮೇಲ್ವಿಚಾರಕಿ, ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು ದಾಸವಾಳ ಅಂಗನವಾಡಿ ಕೇಂದ್ರ, ಮಹದೇವಪೇಟೆ ಅಂಗನವಾಡಿ ಕೇಂದ್ರ, ಪುಟಾಣಿ ನಗರ ಅಂಗನವಾಡಿ ಕೇಂದ್ರ, ರಾಘವೇಂದ್ರ ದೇವಸ್ಥಾನ ಅಂಗನವಾಡಿ ಕೇಂದ್ರದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಛದ್ಮವೇಷ, ನೃತ್ಯಗಳನ್ನು, ನೋಡಿ  ಬಹುಮಾನ ವಿತರಿಸಿದರು.

ನಾಲ್ಕು ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯರು ಸುಜಾತ, ಗೀತಾ, ಶೃತಿ, ಉಮಾವತಿ ಮತ್ತು ಸಹಾಯಕಿಯರು ಅನಿತಾ, ದೈವಾಣಿ, ಇಂದ್ರಮ್ಮ, ಶ್ಯಾಮಲ ಅವರು ಕಾರ್ಯಕ್ರಮವನ್ನು ನಡೆಸಿದರು.

ADVERTISEMENT

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಉಪ ನಿರ್ದೇಶಕ ಪ್ರಸನ್ನ ಕುಮಾರ್, ‘ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ನವೆಂಬರ್ 14 ರಂದು ಮಕ್ಕಳ ದಿನಾಚರಣೆ ಆಚರಿಸುತ್ತಿದ್ದು, ಮಕ್ಕಳ ಆರೈಕೆ, ಹಕ್ಕು ಮತ್ತು ಶಿಕ್ಷಣದ ಕುರಿತು ಹೆಚ್ಚಿನ ಆಲೋಚನೆಯನ್ನು ಮಾಡುವುದರೊಂದಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೋಷಕರು, ಶಿಕ್ಷಕರೊಂದಿಗೆ ಸಮುದಾಯದ ಪ್ರತಿಯೊಬ್ಬರೂ ಸಹಕರಿಸಬೇಕು’ ಎಂದರು.

ಮಕ್ಕಳ ಶಿಕ್ಷಣಕ್ಕೆ ಪೋಷಕರು ಅಂಗನವಾಡಿ ಕಾರ್ಯಕರ್ತರು ಹೆಚ್ಚಿನ ಆಸಕ್ತಿ ವಹಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಪ್ರಾರಂಭವಾಗಿರುವ ಮೊಂಟೆನ್ಸರಿ ಕೇಂದ್ರಗಳಿಗೆ ಮಕ್ಕಳನ್ನು ಸೇರಿಸಿ ಕನ್ನಡದೊಂದಿಗೆ ಇಂಗ್ಲಿಷ್‌ ಕಲಿಸಲು ಸಹಕರಿಸಬೇಕೆಂದು ಕೋರಿದರು.

ಪ್ರಭಾರ ಸಹಾಯಕ ಶಿಶುಅಭಿವೃದ್ಧಿ ಯೋಜನಾಧಿಕಾರಿ ಸವಿತಾ ಕೀರ್ತನ್ ಮಾತನಾಡಿ, ‘ಅಂಗನವಾಡಿ ಕೇಂದ್ರ ಮಕ್ಕಳ ದಿನಾಚರಣೆಗೆ ಬಹುಮಾನ ನೀಡಿದ, ಅಲಂಕಾರಕ್ಕೆ ಸಹಕರಿಸಿದ, ಊಟಪಚಾರಗಳಿಗೆ ಸಹಕಾರ ನೀಡಿದ ಧಾನಿಗಳಾದ ಕೌನ್ಸಿಲರ್ ಬಶೀರ್, ಮಹೇಶ್, ರಮ್ಯಾ, ಸೋನಿ, ಇನ್ನರ್ ವೀಲ್ ರಶ್ಮಿ ಪ್ರವೀಣ್, ಮಹಿಳಾ ಮೋರ್ಚಾ ಸದಸ್ಯರು ನವ್ಯ,ಗಜೇಂದ್ರ, ಆಶಾ, ಅರುಣ್ ರೋಜಾ ಧನ್ಯ ಹರೀಶ್ ಹೇಮಾ ಸಂತೋಷ್, ಬಡೆ ಸಾಬ್, ರಜಿನಿ ಬಸವರಾಜ್, ವಿವಿಲಿಯ ಸ್ಟಿವನ್, ಲತಾ ರವಿ, ರೂಪ ಮಹೇಂದ್ರ, ಗೀತಾ ವಿಶ್ವನಾಥ್, ರಚನಿ ಹರೀಶ, ರಮೇಶ್, ಚಾರ್ಲಿ, ಪೊನ್ನಮ್ಮ, ದುರ್ಗಾಪರಮೇಶ್ವರಿ ಸ್ತ್ರೀ ಶಕ್ತಿ ಸದಸ್ಯರಿಗೆ, ಪೋಷಕರಿಗೆ, ಬಾಲವಿಕಾಸ ಸಮಿತಿ ಸದಸ್ಯರಿಗೆ, ಇಲಾಖೆ ಪರವಾಗಿ ಧನ್ಯವಾದ ಅರ್ಪಿಸಿದರು.

ರಾಘವೇಂದ್ರ ದೇವಸ್ಥಾನದ ಅಂಗನವಾಡಿ ಕೇಂದ್ರದಲ್ಲಿ ಐದು ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ವಿಶೇಷವಾಗಿ ನೆರವೇರಿಸಲಾಯಿತು.

ಪೋಷಕರು ತಮ್ಮ ತಮ್ಮ ಮಕ್ಕಳನ್ನು ಜಂಕ್ ಫುಡ್‌ಗಳಿಂದ, ಮೊಬೈಲ್‌ಗಳಿಂದ ರಕ್ಷಿಸಿಕೊಳ್ಳುವಂತೆ ಕಿವಿಮಾತು ಹೇಳಿದರು. ನಗರಸಭೆ ಸದಸ್ಯ ರಮೇಶ್, ಸಾಂಸ್ಕೃತಿಕ ಕಲಾವೇದಿಕೆಯ ಅಧ್ಯಕ್ಷ ಮಹೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.