ಮಡಿಕೇರಿಯಲ್ಲಿರುವ ರಾಣಿಪೇಟೆ ಹೆಸರಿಗೆ ಮಾತ್ರ ರಾಣಿಪೇಟೆ. ಕಣ್ಣಾರೆ ನೋಡಿದರೆ ಅದು ಕಸದಪೇಟೆಯಂತಿದೆ. ಸ್ವಚ್ಛತೆ ಎಂಬುದು ಇಲ್ಲಿ ಮರೀಚಿಕೆಯಾಗಿದೆ.
ಅದರಲ್ಲೂ ಮುಖ್ಯವಾಗಿ, ಮಾರುಕಟ್ಟೆ ಹಿಂಭಾಗದ ರಸ್ತೆಯಲ್ಲಿ ಸಾಗಿದರೆ ಹೆಜ್ಜೆಹೆಜ್ಜೆಗೂ ಕಸವೇ ಸ್ವಾಗತ ಕೋರುತ್ತವೆ. ಶೌಚಾಲಯದ ಎದುರು ಸದಾ ಕಸ ಬಿದ್ದಿರುತ್ತದೆ. ಅಲ್ಲಿಂದ ಮುಂದೆ ಮುತ್ತಪ್ಪ ದೇಗುಲದ ರಸ್ತೆ ಸಂಪರ್ಕಿಸುವ ಕಡೆ ಸಾಗಿದರೆ ರಸ್ತೆಯ ಒಂದು ಬದಿಯಲ್ಲಿ ಬಿದ್ದಿರುವ ಕಸ ಕೊಳೆತು ನಾರುತ್ತಿದೆ. ಈ ಭಾಗಕ್ಕೆ ಇಲ್ಲಿನ ವಾರ್ಡ್ ಸದಸ್ಯರು, ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಈ ಕಸವನ್ನೆಲ್ಲ ತ್ಯಜಿಸಿ ರಾಣಿಪೇಟೆಯನ್ನು ಸ್ವಚ್ಛಪೇಟೆಯನ್ನಾಗಿಸಬೇಕಾಗಿ ವಿನಂತಿ.
ಧಾರಿಣಿ, ರಾಣಿಪೇಟೆ ಸಮೀಪದ ನಿವಾಸಿ.
ಕುಂದುಕೊರತೆಗಳನ್ನು ಈ ಸಂಖ್ಯೆಗೆ ವಾಟ್ಸ್‌ಆ್ಯಪ್ ಮಾಡಿ ಮೊ: 9448470162
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.