ಮಡಿಕೇರಿ: ತಾಲ್ಲೂಕಿನಲ್ಲಿ ನಕ್ಸಲರಿಗಾಗಿ ಬುಧವಾರವೂ ಕೂಂಬಿಂಗ್ ಮುಂದುವರಿದಿದ್ದು, ನಕ್ಸಲರ ಸುಳಿವು ಪತ್ತೆಯಾಗಿಲ್ಲ.
ಕಡಮಕಲ್ಲು, ಕೂಜಿಮಲೆ ಸೇರಿದಂತೆ ಪುಷ್ಪಗಿರಿ ಬೆಟ್ಟ ಶ್ರೇಣಿಗಳಲ್ಲಿ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ಕೂಂಬಿಂಗ್ ನಡೆಸಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಇದ್ದು ನಿಗಾ ವಹಿಸಿದ್ದಾರೆ. ಆದರೆ, ನಕ್ಸಲರ ಸುಳಿವು ಮಾತ್ರ ಪತ್ತೆಯಾಗಿಲ್ಲ.
ಸದ್ಯ, ಬಿರು ಬೇಸಿಗೆ ಇರುವುದರಿಂದ ಎಲ್ಲೆಡೆ ಕುಡಿಯುವ ನೀರು ಬತ್ತುತ್ತಿದೆ. ನೀರಿನ ಸೆಲೆ ಇರುವ ಕಡೆ ನಕ್ಸಲರು ಹೋಗಿರಬಹುದು ಎಂಬ ಅಂದಾಜು ಇದೆ. ಈಗಾಗಲೇ ಅವರು ಕೊಡಗಿನ ಗಡಿ ದಾಟಿರಬಹುದು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.