ಕುಶಾಲನಗರ: ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಇಕೊ ಕ್ಲಬ್ ಆಶ್ರಯದಲ್ಲಿ ಈಚೆಗೆ ವಿವಿಧ ಔಷಧ ಸಸ್ಯಗಳನ್ನು ನೆಡಲಾಯಿತು.
ಆರ್ಯವೈಶ್ಯ ಮಹಿಳಾ ಮಂಡಳಿಯ 45ನೇ ವಾರ್ಷಿಕೋತ್ಸವದ ಅಂಗವಾಗಿ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಸಹಯೋಗದಲ್ಲಿ ಶಾಲೆಗೆ ಸಸಿಗಳನ್ನು ನೀಡಲಾಗಿದ್ದು, ಶಾಲೆ ಆವರಣದ ‘ಸಸ್ಯ ಶ್ಯಾಮಲ ಔಷಧೀಯ ವನ’ ಸಸಿಗಳನ್ನು ನೆಡಲಾಯಿತು.
‘ಔಷಧೀಯ ಸಸ್ಯಗಳು ಪರಿಸರ ವ್ಯವಸ್ಥೆಯ ಭಾಗವಾಗಿವೆ. ಅವುಗಳ ಸಂರಕ್ಷಣೆಯು ಪರಿಸರ ಸಂರಕ್ಷಣೆಗೆ ಉತ್ತಮ ಕೊಡುಗೆ ನೀಡುತ್ತವೆ. ಔಷಧೀಯ ಸಸ್ಯಗಳು ನಮ್ಮ ಆರೋಗ್ಯ ರಕ್ಷಣೆಗೆ ನೆರವಾಗುತ್ತವೆ. ಔಷಧೀಯ ಗಿಡಗಳ ಪ್ರಯೋಜನಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲು ಈ ವನ ಸಹಕಾರಿಯಾಗಿದೆ’ ಎಂದು ಮುಖ್ಯಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಹೇಳಿದರು.
ಆರ್ಯವೈಶ್ಯ ಮಹಿಳಾ ಮಂಡಳಿಯ ಅಧ್ಯಕ್ಷೆ ಲಕ್ಷ್ಮಿ ಶ್ರೀನಿವಾಸ್, ‘ಮನೆಯಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸುವುದು ಪರಿಸರ ಸ್ನೇಹಿ ಮತ್ತು ಆರ್ಥಿಕವಾಗಿ ಪ್ರಯೋಜನಕಾರಿ’ ಎಂದರು.
ಇಕೊ ಕ್ಲಬ್‌ನ ಉಸ್ತುವಾರಿ, ಶಿಕ್ಷಕಿ ಬಿ.ಡಿ.ರಮ್ಯಾ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಟಿ.ದಯಾನಂದ ಪ್ರಕಾಶ್, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಕೆ.ಟಿ. ಸೌಮ್ಯಾ ಔಷಧೀಯ ವನದ ಬಗ್ಗೆ ತಿಳಿಸಿದರು.
ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಸ್.ಎಂ.ಗೀತಾ, ಅನ್ಸಿಲಾ ರೇಖಾ, ಮಹಿಳಾ ಮಂಡಳಿಯ ಉಪಾಧ್ಯಕ್ಷೆ ವಾಣಿ ಮಹೇಶ್, ಕಾರ್ಯದರ್ಶಿ ತ್ರಿವೇಣಿ ಪ್ರಸಾದ್, ಸಹ ಕಾರ್ಯದರ್ಶಿ ಆರತಿ ಮಂಜುನಾಥ್, ಖಚಾಂಚಿ ಸುಮಾ ಶ್ಯಾಮ್, ನಿರ್ದೇಶಕರಾದ ಲತಾ ರಮೇಶ್, ಅನಿತಾ ಅಶ್ವತ್, ಮಮತಾ ನಾಗೇಂದ್ರ, ಮೀರಾ ಪ್ರಸಾದ್, ಸುಕನ್ಯಾ ಸುರೇಶ್, ಸಲಹಾ ಸಮಿತಿ ಸದಸ್ಯರಾದ ಆಶಾ ಅಶೋಕ್, ರೇಣುಕಾ ಜಯಚಂದ್ರ, ಸಿಬ್ಬಂದಿ ಎಂ. ಉಷಾ ಇದ್ದರು.
ಔಷಧೀಯ ವನದಲ್ಲಿ ಬೇವು, ತುಳಸಿ, ಶುಂಠಿ, ಅರಿಶಿಣ, ಲೋಳೆಸರ, ಹಿಪ್ಪಲಿ, ಕಾಡು ಬಸಳೆ, ಉತ್ತರಾಣಿ, ಗರಿಕೆ, ಆಡುಸೋಗೆ ಹಾಗೂ ಒಂದೆಲಗ ಸೇರಿದಂತೆ ವಿವಿಧ ತಳಿಯ ಔಷಧಿ ಸಸಿಗಳನ್ನು ನೆಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.