ADVERTISEMENT

ಗೋಣಿಕೊಪ್ಪಲು: ಹುಲಿ ದಾಳಿಗೆ ಹಸು ಸಾವು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 3:49 IST
Last Updated 20 ಮಾರ್ಚ್ 2025, 3:49 IST
ಗೋಣಿಕೊಪ್ಪಲು ಬಳಿಯ ಹುದಿಕೇರಿಯಲ್ಲಿ ಹುಲಿ ದಾಳಿಗೆ ಬಲಿಯಾದ ಹಸುವನ್ನು ಕಾಫಿ ಬೆಳೆಗಾರ ಚೆಕ್ಕೇರ ವಾಸು ಕುಟ್ಟಪ್ಪ ವೀಕ್ಷಿಸಿದರು
ಗೋಣಿಕೊಪ್ಪಲು ಬಳಿಯ ಹುದಿಕೇರಿಯಲ್ಲಿ ಹುಲಿ ದಾಳಿಗೆ ಬಲಿಯಾದ ಹಸುವನ್ನು ಕಾಫಿ ಬೆಳೆಗಾರ ಚೆಕ್ಕೇರ ವಾಸು ಕುಟ್ಟಪ್ಪ ವೀಕ್ಷಿಸಿದರು   

ಗೋಣಿಕೊಪ್ಪಲು: ಹುದಿಕೇರಿ ಸಮೀಪ ಕೋಣಂಗೇರಿಯಲ್ಲಿ ಹುಲಿ ದಾಳಿಗೆ ಹಸು ಮೃತಪಟ್ಟಿದೆ.

ಕಾಫಿ ಬೆಳೆಗಾರ ಚೆಕ್ಕೇರ ಗಣಪತಿ ಅವರಿಗೆ ಸೇರಿದ ಹಸುವನ್ನು ಗುರುವಾರ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಹಸುವನ್ನು ಮೇಯಲು ಗದ್ದೆಯಲ್ಲಿ ಕಟ್ಟಿ ಹಾಕಲಾಗಿತ್ತು. ಈ ವೇಳೆಯಲ್ಲಿ ಕಾಫಿ ತೋಟದಿಂದ ಬಂದ ಹುಲಿ ದಾಳಿ ಮಾಡಿ ಹಸುವಿನ ಸ್ವಲ್ಪ ಭಾಗವನ್ನು ತಿಂದು ಹಾಕಿದೆ. ಇದರಿಂದ ಕಾಫಿ ತೊಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ.

ದಾಳಿ ಮಾಡಿದ ಹುಲಿ ಕಾಫಿ ತೊಟದಲ್ಲಿ ಸುಳಿದಾಡುತ್ತಿದ್ದು, ಅದನ್ನು ಸೆರೆ ಹಿಡಿಯಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಬೆಳೆಗಾರ ಚೆಕ್ಕೇರ ವಾಸು ಕುಟ್ಟಪ್ಪ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.