ADVERTISEMENT

ಡಿಸಿಎಫ್ ಪೂವಯ್ಯಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 14:02 IST
Last Updated 21 ಡಿಸೆಂಬರ್ 2019, 14:02 IST
ಪೂವಯ್ಯ
ಪೂವಯ್ಯ   

ಗೋಣಿಕೊಪ್ಪಲು: ನಾಗರಹೊಳೆ ಹುಲಿ ಸಂರಕ್ಷಣಾ ಕೇಂದ್ರದ ಉಪ ನಿರ್ದೇಶಕರಾದ ಡಿಸಿಎಫ್ ಅಜ್ಜಿಕುಟ್ಟೀರ ಪೂವಯ್ಯ ಅವರಿಗೆ ರಾಷ್ಟ್ರಮಟ್ಟದ ಡಬ್ಯೂಡಬ್ಯೂ ಎಫ್ ಪಾಟಾ ಬಾಗ್ ಮಿತ್ರ ಪ್ರಶಸ್ತಿ ಲಭಿಸಿದೆ.

ಪೂವಯ್ಯ ಸಲ್ಲಿಸಿರುವ ಸೇವೆ ಪರಿಗಣಿಸಿ ಡಬ್ಯೂಡಬ್ಯೂ ಎಫ್ ನವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. 1985ರಲ್ಲಿ ಸೇವೆಗೆ ಸರಿದ ಪೂವಯ್ಯ 32 ವರ್ಷಗಳ ಕಾಲ ಅರಣ್ಯ ಇಲಾಖೆಯ ವಿವಿಧ ಹಂತಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ಪೊನ್ನಂಪೇಟೆ ಬಳಿಯ ಅಜ್ಜಿಕುಟ್ಟೀರ ತಮ್ಮಯ್ಯ ಮತ್ತು ಗಂಗಮ್ಮನವರ ಪುತ್ರನಾದ ಪೂವಯ್ಯ, ಬಂಡೀಪುರ, ಪುಷ್ಪಗಿರಿ ಮೊದಲಾದ ಕಡೆ ಸೇವೆಸಲ್ಲಿಸಿ ವನ್ಯಜೀವಿ ಅರಣ್ಯವನ್ನು ಸಂರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ADVERTISEMENT

ಪ್ರಸ್ತುತ ಅವಧಿಯಲ್ಲಿ ಮೈಸೂರು ಅರಣ್ಯ ಮೊಬೈಲ್ ಸ್ವ್ಕಾಡ್ ನ ಡಿಸಿಎಫ್ ಆಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.