ADVERTISEMENT

ಮಡಿಕೇರಿಯಲ್ಲಿ 22,23 ರಂದು ‘ನೀನಾಸಂ ತಿರುಗಾಟ’ದ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2025, 6:38 IST
Last Updated 15 ಜನವರಿ 2025, 6:38 IST

ಪ್ರಜಾವಾಣಿ ವಾರ್ತೆ

ಮಡಿಕೇರಿ: ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ವತಿಯಿಂದ ಜ. 23 ಮತ್ತು 24ರಂದು ಇಲ್ಲಿ ‘ನೀನಾಸಂ ತಿರುಗಾಟ’ದ ನಾಟಕ ಪ್ರದರ್ಶನ ನಡೆಯಲಿದೆ.

ಇಲ್ಲಿನ ಶ್ರೀ ಓಂಕಾರೇಶ್ವರ ದೇವಾಲಯ ಬಳಿ ಇರುವ ಭಾರತೀಯ ವಿದ್ಯಾಭವನದಲ್ಲಿ ಜ. 22ರಂದು ಸಂಜೆ 6.30ಕ್ಕೆ ‘ನೀನಾಸಂ ತಿರುಗಾಟ’ದ ‘ಅಂಕದ ಪರದೆ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.

ADVERTISEMENT

ಮರಾಠಿಯಲ್ಲಿ ಅಭಿರಾಮ್ ಭಡ್ಕಮಕರ್ ರಚಿಸಿರುವ ಈ ನಾಟಕವನ್ನು ಜಯಂತ ಕಾಯ್ಕಿಣಿ ಕನ್ನಡಕ್ಕೆ ತಂದಿದ್ದಾರೆ. ನಾಟಕವನ್ನು ವಿದ್ಯಾನಿಧಿ ವನಾರಸೆ (ಪ್ರಸಾದ್) ನಿರ್ದೇಶಿಸಿದ್ದಾರೆ.

ಜ. 23ರಂದು ಸಂಜೆ 6.30ಕ್ಕೆ ‘ಮಾಲತೀ ಮಾಧವ'’ ನಾಟಕ ಪ್ರದರ್ಶನಗೊಳ್ಳಲಿದೆ.

ಭವಭೂತಿಯ ಈ ನಾಟಕಕ್ಕೆ ಕೆ.ವಿ. ಅಕ್ಷರ ಕನ್ನಡಕ್ಕೆ ತಂದು, ನಿರ್ದೇಶಿಸಿದ್ದಾರೆ ಎಂದು ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.