ADVERTISEMENT

ಕೊಡಗಿನಲ್ಲಿ ಭೂಕಂಪನ: ಸಂಪಾಜೆ ಭಾಗದಲ್ಲಿ ವಿಚಿತ್ರವಾದ ಶಬ್ದ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 13:54 IST
Last Updated 28 ಜೂನ್ 2022, 13:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಡಿಕೇರಿ: ಕೊಡಗಿನ ಕೆಲವೆಡೆ ಮಂಗಳವಾರ ಸಂಜೆ ಮತ್ತೆ ಭೂಮಿ ಕಂಪಿಸಿದೆ.

ಚೆಂಬು ಮತ್ತು ಸಂಪಾಜೆ ಭಾಗದಲ್ಲಿ ವಿಚಿತ್ರವಾದ ಶಬ್ದ ಭೂಮಿಯಿಂದ ಸಂಜೆ 4.45 ರಲ್ಲಿ ಕೇಳಿ ಬಂದಿತು. ಅದೇ ಸಮಯದಲ್ಲಿ ಭೂಮಿ ಕಂಪಿಸಿತು ಎಂದು ಸ್ಥಳೀಯರು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಈ ಕುರಿತು ಪರಿಶೀಲಿಸುತ್ತಿರುವುದಾಗಿ ಕೇಂದ್ರದ ತಜ್ಞ ಅನನ್ಯ ವಾಸುದೇವ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಜೆ ಸಂಭವಿಸಿರುವುದು 1.8 ತೀವ್ರತೆಯ ಭೂಕಂಪ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ದೃಢಪಡಿಸಿದೆ.

ಬೆಳಿಗ್ಗೆ ‌ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದಿಂದ 5.2 ಕಿ.ಮೀ ವಾಯುವ್ಯ ದಿಕ್ಕಿನಲ್ಲಿ ಭೂಮಿಯ 15 ಕಿ.ಮೀ. ಆಳದಲ್ಲಿ ರಿಕ್ಟರ್ ಮಾಪಕ 3.0ರಷ್ಟು ಭೂಕಂಪನವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.