ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶ್ರದ್ಧಾ, ಭಕ್ತಿಯಿಂದ ಈದ್ ಮಿಲಾದ್ ಅನ್ನು ಶುಕ್ರವಾರ ಆಚರಿಸಲಾಯಿತು. ಹಲವೆಡೆ ಮೆರವಣಿಗೆಗಳು ನಡೆದವು. ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳು ನೆರವೇರಿದವು. ಮುಸ್ಲಿಮರ ಮನೆಮನೆಗಳಲ್ಲಿ ಮಕ್ಕಳು ಹೊಸಬಟ್ಟೆ ತೊಟ್ಟು ಹಬ್ಬ ಆಚರಿಸಿದರು.
ಮಡಿಕೇರಿಯಲ್ಲಿ ಬದ್ರಿಯ ಜಮಾಹತ್ ವತಿಯಿಂದ ಧ್ವಜಾರೋಹಣ ನೆರವೇರಿಸಲಾಯಿತು. ನಗರಸಭೆ ಸದಸ್ಯ ಅಮಿನ್ ಮೊಹಿಸಿನ್ ಧ್ವಜಾರೋಹಣ ನೆರವೇರಿಸಿದರು.
ಧರ್ಮಗುರು ಸದರ್ ಹನೀಫ್ ಫೈಜಿ ಅವರು ಧರ್ಮ ಸಂದೇಶ ನೀಡಿದರು. ಅಲೀಲ್ ಲತೀಶಿ ಭಾಗವಹಿಸಿದ್ದರು. ಸಂಜೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸೆ. 7ರಂದು ಬೃಹತ್ ಮೆರವಣಿಗೆ: ಹಬ್ಬದ ಪ್ರಯುಕ್ತ ಸೆ.7ರಂದು ಬೆಳಿಗ್ಗೆ 8 ಗಂಟೆಯಿಂದ ಮಡಿಕೇರಿಯಲ್ಲಿ ಬೃಹತ್ ಮೆರವಣಿಗೆ ನಡೆಯಲಿದೆ ಎಂದು ಅಮಿನ್ ಮೊಹಿಸಿನ್ ತಿಳಿಸಿದರು.
ಗದ್ದಿಗೆಯಿಂದ ಆರಂಭವಾಗುವ ಮೆರವಣಿಗೆಯು ಮಹದೇವಪೇಟೆ ಮುಖ್ಯರಸ್ತೆಯಲ್ಲಿ ಸಾಗಿ ಇಂದಿರಾಗಾಂಧಿ ವೃತ್ತ (ಚೌಕಿ)ದ ಮೂಲಕ ಹಳೆಯ ಖಾಸಗಿ ಬಸ್‌ನಿಲ್ದಾಣ ತಲುಪಿ, ಅಲ್ಲಿಂದ ವಾಪಸ್ ಗಣಪತಿ ಬೀದಿಯ ಮೂಲಕ ಬದ್ರಿಯಾ ಮಸೀದಿಯನ್ನು ತಲುಪಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.