ಸಿದ್ದಾಪುರ (ಕೊಡಗು): ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತೆರಳುತ್ತಿದ್ದ ಗೋಣಿಕೊಪ್ಪಲು ಪ್ರೌಢಶಾಲಾ ಶಿಕ್ಷಕ ಶಿವಾರಂ ಅವರು ಎದುರಿಗೆ ಬಂದ ಆನೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಬೈಕ್‌ನಿಂದ ಬಿದ್ದು ಗಾಯಗೊಂಡರು. ಅವರ ಕಾಲಿಗೆ ಗಾಯವಾಗಿದ್ದು, ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಸಮೀಕ್ಷೆ ಸಲುವಾಗಿ ಮಾಲ್ದಾರೆ ಸಮೀಪದ ಅವರೆಗುಂದ ಹಾಡಿಗೆ ಅವರು ತೆರಳಿದ್ದರು. ಬಸವನಹಳ್ಳಿ ಮಾರ್ಗವಾಗಿ ದುಬಾರೆ ಹಾಡಿಗೆ ತೆರಳುವಾಗ ಕಾಡಾನೆ ಎದುರಾಗಿತ್ತು. ಗಾಬರಿಗೊಂಡು ಬೈಕ್‌ನಲ್ಲಿ ವೇಗವಾಗಿ ತೆರಳಲು ಯತ್ನಿಸಿದಾಗ ಕೆಸರಿನ ರಸ್ತೆಯಲ್ಲಿ ಜಾರಿ ಬಿದ್ದರು. ನಂತರ ಸ್ವಲ್ಪ ದೂರ ಓಡಿ ಪಾರಾದರು. ವಿರಾಜಪೇಟೆ ತಹಶೀಲ್ದಾರ್ ಪ್ರವೀಣ್ ಕುಮಾರ್ ಹಾಗೂ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.