ADVERTISEMENT

ಮಡಿಕೇರಿ | ಕಾಲ್ಸ್‌ ಶಾಲೆ ವಿದ್ಯಾರ್ಥಿಗಳ ಪಾರಮ್ಯ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 5:25 IST
Last Updated 30 ಜೂನ್ 2025, 5:25 IST
   

ಮಡಿಕೇರಿ: ಸಿಐಎಸ್‌ಸಿಇ ನ್ಯಾಷನಲ್ ಸ್ಪೋರ್ಟ್ಸ್ ಮತ್ತು ಗೇಮ್ಸ್, ಕರುಂಬಯ್ಯಸ್ ಅಕಾಡೆಮಿ ಮತ್ತು ಸ್ಪೋರ್ಟ್ಸ್ ವತಿಯಿಂದ ಗೋಣಿಕೊಪ್ಪಲಿನ ಕಾಲ್ಸ್‌ ಶಾಲೆಯ ಎಎಸ್‌ಎಫ್ ಶೂಟಿಂಗ್ ರೇಂಜ್‌ನಲ್ಲಿ ವಲಯ ಮಟ್ಟದ ಶೂಟಿಂಗ್ ಸ್ಪರ್ಧೆ ನಡೆಯಿತು.

14, 17 ಹಾಗೂ 19ರ ವಯೋಮಿತಿ ವಿಭಾಗಗಳಲ್ಲಿ ಒಟ್ಟು 46 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇಷ್ಟೂ ವಿಭಾಗದಲ್ಲಿಯೂ ಕಾಲ್ಸ್‌ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ, ಮುಂದೆ ನಡೆಯುವ ಪ್ರಾದೇಶಿಕ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆದರು.

ವಿಜೇತರ ವಿವರ: ಕ್ರಿಶ್ ಗಣಪತಿ, ಮಿಥುನ್ ಗಣಪತಿ, ಅಧಿತಿ ಮುತ್ತಮ್ಮ, ಪೂಜಿತ್ ಕಾವೇರಪ್ಪ, ಶೈನಕ ಸಚಿನ್, ಮಯಾಂಕ್ ಜಿ, ಟಿಯಾನ ತಂಗಮ್ಮ, ಬಿದ್ದಪ್ಪ ನಾಣಯ್ಯ, ವಿಹಾ ಪೊನ್ನಮ್ಮ, ಡಿ.ಸಮರ್ಥ್, ಸಾಶ್ಯ ನಿಶಾಂತ್, ನರೇನ್ ಅಯ್ಯಪ್ಪ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.