ಸೋಮವಾರಪೇಟೆ: ಸಮೀಪದ ಬಜೆಗುಂಡಿಯ ಕರಿಮಾರಿಯಮ್ಮ ದೇವಾಲಯದ 28ನೇ ವಾರ್ಷಿಕೋತ್ಸವ ಮಂಗಳವಾರ ಸಂಪನ್ನಗೊಂಡಿತು.
ಸೋಮವಾರ ಆರಂಭಗೊಂಡು ಪೂಜಾ ಕಾರ್ಯದಲ್ಲಿ ನವಕ ಪ್ರಧಾನ ಕಲಾಕಲಶ ಪ್ರತಿಷ್ಠೆ, ಕರಿಮಾರಿಯಮ್ಮ ದೇವರಿಗೆ ಕಲಾತತ್ವಾಧಿವಾಸ ಹೋಮ, ಕಲಾಕಲಶಾಭಿಷೇಕ, ಮಹಾಪೂಜೆ ನೆರವೇರಿತು. ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರಗ ಮೆರವಣಿಗೆ ನಡೆಯಿತು. ಕರಗವನ್ನು ಗ್ರಾಮದ ಮಣಿ, ಮಣಿಕಂಠ ಮತ್ತು ಸಂದೀಪ ಅವರು ಹೊತ್ತು ದೇವಿಗೆ ಸೇವೆ ಸಲ್ಲಿಸಿದರು.
ಮಂಗಳವಾರ ಬೆಳಿಗ್ಗೆ 6 ಗಂಟೆಗೆ ದೇವಿಗೆ ಅಲಂಕಾರ, ಪೂಜೆ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.