ನೀರಿನ ಹೊಂಡದಲ್ಲಿ ಬಿದ್ದ ಶ್ವಾನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಅಂಬಟ್ಟಿಯ ಗಾಲ್ಫ್ ಮೈದಾನದ ಹೆಲಿಪ್ಯಾಡ್ ನಲ್ಲಿ ಅಗ್ನಿಶಾಮಕ ಪಡೆಯ ಸಿಬ್ಬಂದಿ ನೀರಿನ ಹೊಂಡವೊಂದರಲ್ಲಿ ಮುಳುಗುತ್ತಿದ್ದ ನಾಯಿಯನ್ನು ರಕ್ಷಿಸಿದರು.
ನೀರಿನ ಹೊಂಡದಲ್ಲಿ ಬಿದ್ದ ಶ್ವಾನ ರಕ್ಷಣೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿಗೆ ಬರಲಿರುವುದರಿಂದ ಅಗ್ನಿಶಾಮಕ ಪಡೆಯ ಸಿಬ್ಬಂದಿಯನ್ನು ಇಲ್ಲಿ ನಿಯೋಜಿಸಲಾಗಿತ್ತು. ಈ ವೇಳೆ ಗಾಲ್ಫ್ ಮೈದಾನದ ಹೊಂಡದಲ್ಲಿ ನಾಯಿಯೊಂದು ಬಿದ್ದು ಹೊರ ಬರಲು ಪರದಾಡುತ್ತಿತ್ತು. ಈ ವೇಳೆ ಅಗ್ನಿಶಾಮಕ ಪಡೆಯ ಸಿಬ್ಬಂದಿ ರಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.