ADVERTISEMENT

ಫುಟ್ ಬಾಲ್ ಟೂರ್ನಿಗೆ ಚಾಲ‌ನೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 7:05 IST
Last Updated 1 ಫೆಬ್ರುವರಿ 2026, 7:05 IST

ಸುಂಟಿಕೊಪ್ಪ: ಇಲ್ಲಿ ನಡೆಯುತ್ತಿರುವ ಮಿಡ್ ಸಿಟಿ ಮೂರನೇ ವರ್ಷದ  5 ಆಟಗಾರರ ರಾಷ್ಟ್ರಮಟ್ಟದ ಉದ್ಘಾಟನಾ ಟೂರ್ನಿಯಲ್ಲಿ ಗೋವಾ ತಂಡ ಜಯಗಳಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ಶುಕ್ರವಾರ ರಾತ್ರಿ ನಡೆದ ಉದ್ಘಾಟನಾ ಪಂದ್ಯವು ಗೋವಾ ಮತ್ತು ಅತಿಥೇಯ ಮಿಡ್ ಸಿಟಿ ಜೂನಿಯರ್ ತಂಡಗಳ ನಡುವೆ ನಡೆಯಿತು. ಎರಡು ತಂಡಗಳು ಅನುಭವಿ ಆಟಗಾರರನ್ನು ಹೊಂದಿದ್ದು, ಹೊಂದಾಣಿಕೆಯ ಆಟದ ಮೂಲಕ ಎರಡು ತಂಡಗಳ ಆಕರ್ಷಕ ಪ್ರದರ್ಶನಗಳ ಮೂಲಕ ಮನರಂಜನೆ ನೀಡಿದವು.

ಪಂದ್ಯದ ಮೊದಲರ್ಧದಲ್ಲಿ ಗೋವಾ ತಂಡ ಮಿಡ್ ಸಿಟಿ ತಂಡದ ಮೇಲೆ ಹಿಡಿತವನ್ನು ಸಾಧಿಸಿ , 5-0 ಗೋಲುಗಳ ಮುನ್ನಡೆ ಸಾಧಿಸಿತ್ತು. ಆದರೆ‌ ದ್ವಿತೀಯ ಅರ್ಧದಲ್ಲಿ ಮಿಡ್ ಸಿಟಿ ತಂಡದವರು ಆಕರ್ಷಕ ಆಟದೊಂದಿಗೆ ಗೋವಾ ತಂಡಕ್ಕೆ 2 ಗೋಲುಗಳ  ಆಘಾತ ನೀಡಿದರು. ಆದರೆ, ಕೊನೆಯ 5 ನಿಮಿಷದಲ್ಲಿ 2 ಗೋಲುಗಳನ್ನು ಬಾರಿಸಿ, ಕೊನೆಯಲ್ಲಿ 7-2 ಗೋಲುಗಳಿಂದ ಗೋವಾ ಜಯಗಳಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ಪಂದ್ಯಕ್ಕೂ ಮೊದಲು ಕೊಡಗು ಜಿಲ್ಲಾಧಿಕಾರಿಯ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್‌ ಚಾಲನೆ ನೀಡಿದರು.ರಾಷ್ಟ್ರೀಯ ಆಟಗಾರರನ್ನು ಪರಿಚಯಿಸಿ ಮೈದಾನ ಸ್ಫೂರ್ತಿಯ ನೆಲವಾಗಿದೆ ಎಂದರು.

ADVERTISEMENT

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಕಡಗದಾಳು ಪಂಚಾಯತಿ ಮಾಜಿ ಅಧ್ಯಕ್ಷ ಜಯಣ್ಣ, ಬ್ಲೂಬಾಯ್ಸ್ ಯುವಕ ಸಂಘದ ವ್ಯವಸ್ಥಾಪಕ ಟಿ.ವಿ.ಪ್ರಸನ್ನ ಕ್ರೀಡಾಪಟುಗಳನ್ನು ಪರಿಚಯಿಸಿದರು. ಗೆದ್ದ ತಂಡಕ್ಕೆ ₹2 ಲಕ್ಷ ಬಹುಮಾನ ನೀಡುತ್ತಿರುವುದು ಇತಿಹಾಸ ಸೃಷ್ಟಿಸಿದೆ ಎಂದು  ಪಿ.ಆರ್.ಸುನಿಲ್ ಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.