ಮಡಿಕೇರಿ: ಇಲ್ಲಿನ ಭಾಗಮಂಡಲದ ತೊಡಿಕಾನ ಸಮೀಪದ ಮಾವಿನಕಟ್ಟೆ ನರುವೋಳು ಎಂಬಲ್ಲಿ ದಟ್ಟ ಕಾಡಿನ ನಡುವೆ ಸುಮಾರು 60 ಅಡಿ ಆಳದ ಪ್ರಪಾತಕ್ಕೆ ಆಕಸ್ಮಿಕವಾಗಿ ಬಿದ್ದು ಅರಣ್ಯ ವೀಕ್ಷಕ ಚಿಣ್ಣಪ್ಪ (57) ಮೃತಪಟ್ಟಿದ್ದಾರೆ.
ಇವರು ಇತರೆ ಮೂವರು ಸಿಬ್ಬಂದಿಯೊಂದಿಗೆ ಬೆಳಿಗ್ಗೆಯಿಂದಲೇ ಗಸ್ತು ಕಾರ್ಯ ಆರಂಭಿಸಿದ್ದರು. ನಿಗದಿತ ಗಸ್ತು ಪೂರೈಸುವಷ್ಟರಲ್ಲಿ ಕತ್ತಲಾಗಿ ದಾರಿ ತಪ್ಪಿದ್ದಾರೆ. ಜತೆಯಲ್ಲಿ ತಂದಿದ್ದ ನೀರೂ ಮುಗಿದು, ಬಂಡೆಯ ನಡುವೆ ಹರಿಯು ತ್ತಿದ್ದ ಝರಿಯಲ್ಲಿ ನೀರು ಕುಡಿಯಲು ಯತ್ನಿಸಿದ್ದಾರೆ. ಆದರೆ, ಕಾಲು ಜಾರಿ ಬಂಡೆಯ ಕೆಳಗೆ ತೂರಿ ರಕ್ಷಿಸುವಂತೆ ಕೂಗಿಕೊಂಡಿದ್ದಾರೆ. ಇಬ್ಬರು ಸಿಬ್ಬಂದಿ ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಜಲಪಾತದಂತಿದ್ದ ಪ್ರಪಾತಕ್ಕೆ ಚಿಣ್ಣಪ್ಪ ಬಿದ್ದು ಸ್ಥಳದಲ್ಲೇ ಮೃತಪಟ್ಟರು.
ಜತೆಯಲ್ಲಿದ್ದ ಸಿಬ್ಬಂದಿ ಕಾಡಿನಿಂದ ಹೊರಬರುವ ಹೊತ್ತಿಗೆ ನಸುಕು 4 ಗಂಟೆ ದಾಟಿತ್ತು. ನಂತರ, ಕಾರ್ಯಾಚರಣೆ ಕೈಗೊಂಡು ಮೃತದೇಹವನ್ನು ಪತ್ತೆ ಹ ಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.