
ಪ್ರಜಾವಾಣಿ ವಾರ್ತೆ
ಮಡಿಕೇರಿ: ‘ಗಂಡ– ಹೆಂಡತಿ ಜಗಳವಾಡಿದರೆ, ಆಸ್ತಿಗಾಗಿ ವೈಯಕ್ತಿಕ ಜಗಳಗಳಾದರೆ ನಾನೇನು ಮಾಡಬೇಕು, ಪೊಲೀಸರೇನು ಮಾಡಬೇಕು?’ ಎಂದು ಗೃಹಸಚಿವ ಜಿ.ಪರಮೇಶ್ವರ್ ಕೇಳಿದರು.
ಸಮೀಪದ ಸುಂಟಿಕೊಪ್ಪದಲ್ಲಿ ಭಾನುವಾರ ಪೊಲೀಸ್ ವಸತಿಗೃಹಗಳನ್ನು ಉದ್ಘಾಟಿಸಿ ಮಾತನಾಡಿದರು.
‘ಸಾರ್ವಜನಿಕರು ಉತ್ತಮವಾಗಿ ಕಾರ್ಯಕ್ರಮ, ಜಾತ್ರೆ ಮಾಡಲೆಂದು ಮಳೆ, ಬಿಸಿಲೆನ್ನದೇ, ನಿದ್ದೆ ಇಲ್ಲದೇ ಕೆಲಸ ಮಾಡುವ ಪೊಲೀಸರ ನೈತಿಕ ಸ್ಥೈರ್ಯ ಕುಸಿಯುವಂತಹ ಮಾತುಗಳನ್ನು ವಿರೋಧ ಪಕ್ಷದವರು ಆಡಬಾರದು. ಪೊಲೀಸರೇ ಸರಿ ಇಲ್ಲ ಎನ್ನುವುದು, ಕಾನೂನು–ಸುವ್ಯವಸ್ಥೆ ಕುಸಿದಿದೆ ಎಂಬುದು ಸರಿಯಲ್ಲ’ ಎಂದರು.
‘ದೇಶದಲ್ಲಿಯೇ ಕರ್ನಾಟಕ ಪೊಲೀಸ್ ಮೊದಲ ಸ್ಥಾನದಲ್ಲಿದೆ. ಮಹಿಳೆಯರಿಗೆ ಸುರಕ್ಷಿತ ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಅದಕ್ಕಾಗಿಯೇ ಬೆಂಗಳೂರಿಗೆ ಹೂಡಿಕೆದಾರರು ಬರುತ್ತಿದ್ದಾರೆ’ ಎಂದು ಪ್ರತಿಪಾದಿಸಿದರು.
‘ಪೊಲೀಸ್ ವಸತಿ ಗೃಹ ಯೋಜನೆಯನ್ನು 2030ರವರೆಗೂ ಮುಂದುವರಿಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.