ADVERTISEMENT

ನಾಪೋಕ್ಲು: ತಲಕಾವೇರಿಗೆ ಚಿನ್ನಾಭರಣ ರವಾನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 4:25 IST
Last Updated 16 ಅಕ್ಟೋಬರ್ 2025, 4:25 IST
ಚಿನ್ನಾಭರಣಗಳನ್ನು ಭಾಗಮಂಡಲ ಭಗಂಡೇಶ್ವರ ದೇವಾಲಯದಿಂದ ಬುಧವಾರ  ವಾದ್ಯಗೋಷ್ಠಿಯೊಂದಿಗೆ ಕೊಂಡೊಯ್ಯಲಾಯಿತು.
ಚಿನ್ನಾಭರಣಗಳನ್ನು ಭಾಗಮಂಡಲ ಭಗಂಡೇಶ್ವರ ದೇವಾಲಯದಿಂದ ಬುಧವಾರ  ವಾದ್ಯಗೋಷ್ಠಿಯೊಂದಿಗೆ ಕೊಂಡೊಯ್ಯಲಾಯಿತು.   

ನಾಪೋಕ್ಲು: ಕಾವೇರಿ ತೀರ್ಥೋದ್ಭವದ ಪ್ರಯುಕ್ತ ಚಿನ್ನಾಭರಣಗಳನ್ನು ಭಾಗಮಂಡಲ ಭಗಂಡೇಶ್ವರ ದೇವಾಲಯದಿಂದ ಬುಧವಾರ ತಲಕಾವೇರಿಗೆ ಕೊಂಡೊಯ್ಯಲಾಯಿತು.

ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಅವರಿಂದ ತಲಕಾವೇರಿ ಕ್ಷೇತ್ರದ ತಕ್ಕರಾದ ಕೋಡಿ ಮೋಟಯ್ಯ ಪಡೆದರು. ಬಳಿಕ, ದೇವಾಲಯದ ಸುತ್ತ ಚೆಂಡೆ ವಾದ್ಯಗೋಷ್ಠಿಯೊಂದಿಗೆ ಪ್ರದಕ್ಷಿಣೆ ಬರಲಾಯಿತು. ಚಿನ್ನಾಭರಣಗಳನ್ನು ತಲಕಾವೇರಿಗೆ ಕೊಂಡೊಯ್ಯಲಾಯಿತು.

ಆಡಳಿತಾಧಿಕಾರಿ ಚಂದ್ರಶೇಖರ್, ಪಾರುಪತ್ಯೆಗಾರ ಪೊನ್ನಣ್ಣ, ಭಾಗಮಂಡಲ ತಕ್ಕರಾದ ಬಳ್ಳಡ್ಕ ಅಪ್ಪಾಜಿ, ಕೊಡಗರ ಹರ್ಷ ನಗರಸಭಾ ಸದಸ್ಯೆ ಶ್ವೇತಾ, ಯುವ ವೇದಿಕೆಯ ಸೋನಿಯಾ, ಶರತ್, ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಪೇರಿಯನ ಜಯಾನಂದ, ಪರ್ಲಕೋಟಿ ಆನಂದ, ಕುಟ್ಟನ ಸುದೀಪ್, ಪೈಕೆರ ಮನೋಜ್, ದಂಬೆಕೋಡಿ ಆನಂದ, ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ಅಧ್ಯಕ್ಷ ಕುದುಕುಳಿ ಕಿಶೋರ್, ಕಾರ್ಯದರ್ಶಿ ಚಲನ್, ಭಾಗಮಂಡಲ ದೇವಸ್ಥಾನದ ನಾಡು ತಕ್ಕರಾದ ಬಾರಿಕೆ ಮತ್ತು ನಂಗಾರು ಕುಟುಂಬಸ್ಥರು, ದೇಶ ತಕ್ಕರಾದ ಕುದುಪಜೆ ಮತ್ತು ಸೂರ್ತಲೆ ಕುಟುಂಬಸ್ಥರು ಭಾಗವಹಿಸಿದ್ದರು.

ADVERTISEMENT
ಚಿನ್ನಾಭರಣಗಳನ್ನು ಭಾಗಮಂಡಲ ಭಗಂಡೇಶ್ವರ ದೇವಾಲಯದಿಂದ ಬುಧವಾರ  ವಾದ್ಯಗೋಷ್ಠಿಯೊಂದಿಗೆ ಕೊಂಡೊಯ್ಯಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.