ಮಡಿಕೇರಿ: ಬೆಂಗಳೂರಿನ ಜಯಪ್ರಕಾಶ ನಾರಾಯಣ ಯೂತ್ ಸೆಂಟರ್‌ನಲ್ಲಿ ಈಚೆಗೆ ನಡೆದ ಸಿಐಎಸ್‌ಸಿಇ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕರ್ನಾಟಕ–ಗೋವಾವನ್ನು ಪ್ರತಿನಿಧಿಸಿದ್ದ ಗೋಣಿಕೊಪ್ಪಲಿನ ಕಾಲ್ಸ್ ಶಾಲೆಯ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ನಿನ 18 ಕ್ರೀಡಾಪಟುಗಳು ಒಟ್ಟು 22 ಪದಕಗಳನ್ನು ಪಡೆದಿದ್ದಾರೆ.
ಅವುಗಳಲ್ಲಿ 8 ಚಿನ್ನ, ಬೆಳ್ಳಿ ಹಾಗೂ ಕಂಚಿನ ತಲಾ 7 ಪದಕಗಳು ಸೇರಿವೆ. 9 ಕ್ರೀಡಾಪಟುಗಳು ಮುಂದೆ ನಡೆಯಲಿರುವ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.
ಈ ಕ್ರೀಡಾಕೂಟದಲ್ಲಿ ದೇಶದ ವಿವಿಧ ಭಾಗಗಳಿಂದ ಒಟ್ಟು 1,600 ಕ್ರೀಡಾಪಟುಗಳು ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.