ADVERTISEMENT

ಹಳ್ಳಿಗಟ್ಟು ಮಾರಮ್ಮದೇವಿ ವಾರ್ಷಿಕ ಉತ್ಸವ 16ರಂದು

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 5:13 IST
Last Updated 15 ಜುಲೈ 2024, 5:13 IST

ಗೋಣಿಕೊಪ್ಪಲು: ಹಳ್ಳಿಗಟ್ಟು ಮಾರಮ್ಮ ದೇವಿ ವಾರ್ಷಿಕ ಉತ್ಸವ ಜು 16ರಂದು ಜರುಗಲಿದೆ.

ಪತ್ರಿಕಾ ಹೇಳಿಕೆ ನೀಡಿವ ಎಂದು ಗುಂಡಿಯತ್ ಅಯ್ಯಪ್ಪ, ಭದ್ರಕಾಳಿ ಹಾಗೂ ಮಾರಮ್ಮ ದೇವರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ , ವಾರ್ಷಿಕವಾಗಿ ಕಕ್ಕಡ ಮಾಸಕ್ಕೆ ಒಂದು ದಿನ ಮುಂಚೆ ನಡೆಯುವ ಮಾರಮ್ಮ ಮಾರಿಗುಡಿ ಹಬ್ಬ ಅಂದು ಬೆಳಿಗ್ಗೆ 9ಗಂಟೆಯಿಂದ ಸಂಜೆ 3 ಗಂಟೆಯವರೆಗೆ ನಡೆಯಲಿದೆ. ಮತ್ತೊಂದು ಮಾರಿಗುಡಿ ಹಬ್ಬ ಜು. 22ರಂದು ನಡೆಯಲಿದೆ. ಹರಕೆ, ಕಾಣಿಕೆ ಸಎರಡು ದಿನಗಳಲ್ಲಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಮಚ್ಚಿಯಂಡ ಕುಟುಂಬದವರೇ ಇಲ್ಲಿ ಪೂಜಾರಿಗಳಾಗಿದ್ದು,  ಹೆಚ್ಚಿನ ಮಾಹಿತಿಗೆ ಅಧ್ಯಕ್ಷರನ್ನು (9880967573) ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.