ADVERTISEMENT

ಗೋಣಿಕೊಪ್ಪಲು: ಪರಿಸರದಲ್ಲಿ ಸಿಗುವ ಪಾಠ ದೊಡ್ಡದು

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 6:34 IST
Last Updated 13 ಜುಲೈ 2024, 6:34 IST
ಗೋಣಿಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕಶಾಲೆ ಆವರಣದಲ್ಲಿ ಟಿ.ಎಲ್.ಶ್ರೀನಿವಾಸ್, ಶ್ರೀಧರ್ ನೆಲ್ಲಿತ್ತಾಯ, ಕುಮಾರ್ ಗಿಡನೆಟ್ಟರು.
ಗೋಣಿಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕಶಾಲೆ ಆವರಣದಲ್ಲಿ ಟಿ.ಎಲ್.ಶ್ರೀನಿವಾಸ್, ಶ್ರೀಧರ್ ನೆಲ್ಲಿತ್ತಾಯ, ಕುಮಾರ್ ಗಿಡನೆಟ್ಟರು.   

ಗೋಣಿಕೊಪ್ಪಲು: ವಿದ್ಯಾರ್ಥಿಗಳು ತರಗತಿಗಿಂತ ಪರಿಸರದಲ್ಲಿ ಕಲಿಯುವ ಪಾಠ ವಿಭಿನ್ನವಾಗಿರುತ್ತದೆ ಎಂದು ಕಾವೇರಿ ಜಲಮೂಲ ಸಂರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಹೇಳಿದರು.

ಗೋಣಿಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಗಿಡನೆಟ್ಟು ಅವರು ಮಾತನಾಡಿದರು. ವಿದ್ಯಾರ್ಥಿಗಳು ಪರಿಸರದೊಂದಿಗೆ ಹೆಚ್ಚಾಗಿ ಬೆರೆಯಬೇಕು ಎಂದರು.

ಪತ್ರಕರ್ತ ಶ್ರೀಧರ್ ನೆಲ್ಲಿತ್ತಾಯ ಮಾತನಾಡಿ ವಿದ್ಯಾರ್ಥಿಗಳು ಗಿಡನೆಡುವಾಗ ತೋರುವ ಪ್ರೀತಿಯನ್ನು ಅವುಗಳನ್ನು ಕಾಪಾಡಿಕೊಳ್ಳುವಾಗಲು ತೋರಬೇಕು ಎಂದರು.
ಉದ್ಯಮಿ ಜೋಸೆಫ್ ಆಂಥೋನಿ, ಎಸ್ ಡಿಎಂಸಿ ಅಧ್ಯಕ್ಷೆ ಶಾಂತಿ, ಅನುಷಾ, ಬಾಬಾಶಂಕರ್, ಉಷಾ ಪ್ರೀತಮ್ಮ, ಮುಖ್ಯ ಶಿಕ್ಷಕ ಕುಮಾರ್ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.