ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಇನ್ನೂ ಸಂಪೂರ್ಣ ನಿಂತಿಲ್ಲ. ಜೋರುಗಾಳಿ ಬೀಸುತ್ತಿದ್ದು, ಆಗಾಗ್ಗೆ ಮಳೆ ಬಿರುಸಿನಿಂದ ಒಮ್ಮೆಗೆ ಸುರಿಯುತ್ತಿದೆ.
ಮಡಿಕೇರಿ ನಗರದಲ್ಲಿ ಮಧ್ಯಾಹ್ನದ ನಂತರ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಬಿರುಸಿನ ಮಳೆ ಸುರಿಯಿತು. ನಂತರ, ಬಿಟ್ಟು ಬಿಟ್ಟು ಜೋರಾಗಿ ಮಳೆಯಾಗುತ್ತಲೇ ಇತ್ತು.
ಸಂಜೆ ಶಾಲೆ ಬಿಡುವ ಸಮಯದಲ್ಲಿ ಜೋರು ಮಳೆ ಸುರಿದು ವಿದ್ಯಾರ್ಥಿಗಳು ಪರದಾಡಿದರು. ನಿರಂತರವಾಗಿ ಬೀಸುತ್ತಲೇ ಇರುವ ಶೀತಗಾಳಿ ಜನರನ್ನು ನಡುಗಿಸಿದೆ.
ಸದ್ಯ ಇನ್ನೂ ಕೆಲವು ದಿನಗಳ ಕಾಲ ಮಳೆ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಹವಾಮಾನ ಇಲಾಖೆ ಕೊಡಗು ಜಿಲ್ಲೆಯ ಯೆಲ್ಲೊ ಅಲರ್ಟ್ ನೀಡಿದ್ದು, ಭಾರಿ ಮಳೆ ಬೀಳುವ ಮುನ್ಸೂಚನೆ ನೀಡಿದೆ.
ಮಡಿಕೇರಿ ತಾಲ್ಲೂಕಿನಲ್ಲಿ ಸರಾಸರಿ ಮಳೆ 2 ಸೆಂ.ಮೀ, ವಿರಾಜಪೇಟೆ ತಾಲ್ಲೂಕಿನಲ್ಲಿ 1.5, ಪೊನ್ನಂಪೇಟೆ ತಾಲ್ಲೂಕಿನಲ್ಲಿ 2.7, ಸೋಮವಾರಪೇಟೆ ತಾಲ್ಲೂಕಿನಲ್ಲಿ 3.1 ಸೆಂ.ಮೀ ಮಳೆಯಾಗಿದೆ.
ಹೋಬಳಿವಾರು ಗಮನಿಸಿದರೆ, ಮಡಿಕೇರಿಯ ಕಸಬಾದಲ್ಲಿ 1, ನಾಪೋಕ್ಲು 2.3, ಸಂಪಾಜೆ 1.5, ಭಾಗಮಂಡಲ 3.5, ವಿರಾಜಪೇಟೆ 1.5, ಅಮ್ಮತ್ತಿ 1.5, ಹುದಿಕೇರಿ 3.8, ಶ್ರೀಮಂಗಲ 4.9, ಪೊನ್ನಂಪೇಟೆ 1.2, ಬಾಳೆಲೆ 1.2, ಸೋಮವಾರಪೇಟೆ 2.8, ಶನಿವಾರಸಂತೆ 1.3, ಶಾಂತಳ್ಳಿ 5.3, ಕೊಡ್ಲಿಪೇಟೆ 3.3 ಸೆಂ.ಮೀನಷ್ಟು ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.