ADVERTISEMENT

ಶನಿವಾರಸಂತೆ: ಸಿಡಿಲು ಸಹಿತ ಭಾರಿ ಮಳೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 5:01 IST
Last Updated 9 ಅಕ್ಟೋಬರ್ 2024, 5:01 IST

ಶನಿವಾರಸಂತೆ: ಇಲ್ಲಿನ ಹೋಬಳಿ ಕೇಂದ್ರವಾದ ಶನಿವಾರಸಂತೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಭಾರಿ ಮಳೆ ಸುರಿಯಿತು.

ಗುಡುಗು, ಸಿಡಿಲಿನಿಂದ ಕೂಡಿದ ಮಳೆಯು ರಾತ್ರಿ 8.30ಕ್ಕೆ ಆರಂಭವಾಗಿದ್ದು, ಸುಮಾರು ಒಂದು ಗಂಟೆಗೂ ಅಧಿಕ ಕಾಲ ಬಿರುಸಾಗಿಯೇ ಸುರಿಯಿತು. ಸಿಡಿಲಬ್ಬರಕ್ಕೆ ಜನರು ಭೀತಿಗೆ ಒಳಗಾದರು.

ಈ ಸಮಯದಲ್ಲಿ ಕಾಫಿ ತೋಟಕ್ಕೆ ಔಷಧಿ ಸಿಂಪಡಿಸುವ ಕಾರ್ಯಕ್ಕೆ ಕಾಫಿ ಬೆಳೆಗಾರರು ಮುಂದಾಗಿದ್ದರು, ಈ ರೀತಿಯ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಕಾಫಿ ಬೆಳೆಯ ಫಸಲು ನಷ್ಟ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.