ಮಡಿಕೇರಿ: ಕಳೆದ 18 ತಿಂಗಳುಗಳಿಂದ ಹೊರಬಾರದ ‘ಹಿಂಗಾರ’ ಪತ್ರಿಕೆ, ಮತ್ತೆ ಶೀಘ್ರದಲ್ಲಿ ‘ಹಿಂಗಾರ ಸಂಯುಕ್ತ ಸಂಚಿಕೆ’ ಹೊರಬರಲಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದರು.
ಇಲ್ಲಿನ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ‘ಸಮಾಗಮ ಸಭೆ’ಯಲ್ಲಿ ಅವರು ತಮ್ಮ ಯೋಜನೆಗಳನ್ನು ಸಭಿಕರು ಮುಂದಿಟ್ಟರು.
‘ಕಳೆದ 2 ಅವಧಿಯಲ್ಲಿನ ಫೆಲೋಶಿಪ್‌ನ ಪುಸ್ತಕ ಹೊರತರಲು ಬಾಕಿ ಇದ್ದು, ಮೊದಲ ಸಭೆಯಲ್ಲಿಯೇ ಪುಸ್ತಕ ಹೊರ ತರಲು, ಗೌರವ ಪ್ರಶಸ್ತಿ, ಪುಸ್ತಕ ಬಹುಮಾನವನ್ನು ನೀಡಲು ಕೆದಂಬಾಡಿ ರಾಮಯ್ಯ ಗೌಡರ ಸಂಸ್ಮರಣಾ ದಿನವನ್ನು ಸುಳ್ಯದಲ್ಲಿ ಆಯೋಜಿಸಲು ಮೊದಲ ಸಭೆಯಲ್ಲೇ ತೀರ್ಮಾನಿಸಲಾಗಿದೆ’ ಎಂದು ತಿಳಿಸಿದರು.
‘ಮಂಗಳೂರಿನಲ್ಲಿ 5 ಭಾಷಾ ಅಕಾಡೆಮಿಗಳು, ಒಂದು ಯಕ್ಷಗಾನ ಅಕಾಡೆಮಿ ಸೇರಿ ಸೆ. 24 ಮತ್ತು 25 ರಂದು ಕಾರ್ಯಕ್ರಮ ನಡೆಯಲಿದೆ’ ಎಂದು ಹೇಳಿದರು.
ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮಾತನಾಡಿ, ‘ಅರೆಭಾಷೆಗೆ ಸಂಬಂಧಿಸಿದಂತೆ ಐಎಸ್ಒ ಸ್ಥಾನಮಾನ ಪಡೆಯಲು ಮತ್ತಷ್ಟು ಶ್ರಮಿಸಬೇಕಿದೆ’ ಎಂದು ಸಲಹೆ ನೀಡಿದರು.
ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೆರಿಯನ ಜಯಾನಂದ, ಮೈಸೂರು ಗೌಡ ಸಮಾಜದ ಕೊಂಬಾರನ ಬಸಪ್ಪ ಹಲವು ಸಲಹೆಗಳನ್ನು ನೀಡಿದರು.
ಸುಳ್ಯ ತಾಲ್ಲೂಕಿನ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಚಿಂತಕರಾದ ಪುದಿಯನೆರವನ ರೇವತಿ ರಮೇಶ್, ಬಾರಿಯಂಡ ಜೋಯಪ್ಪ, ಎ.ಟಿ.ಕುಸುಮಾಧರ, ಜಯಪ್ರಕಾಶ್ ಮೋಂಟಡ್ಕ, ಕೋರನ ಸರಸ್ವತಿ, ಚಂಡೀರ ಬಸಪ್ಪ, ಸೂದನ ಈರಪ್ಪ, ವಿದೂಷಿ ಕಾವ್ಯಶ್ರೀ ಕಪಿಲ್, ಜ್ಞಾನೇಶ್, ತುಂತಜೆ ಗಣೇಶ್, ನವೀನ್ ಅಂಬೆಕಲ್ಲು, ಚಿಲ್ತಡ್ಕ ಪರಶುರಾಮ, ಸುರೇಶ್ ಅಮೈ, ಕೆ.ಟಿ.ವಿಶ್ವನಾಥ, ಎ.ಕೆ.ಹಿಮಕರ, ಸದಸ್ಯರಾದ ತೇಜಕುಮಾರ್ ಕುಡೆಕಲ್ ಹಾಗೂ ಪಿ.ಎಸ್.ಕಾರ್ಯಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.