ADVERTISEMENT

ಕೂರ್ಗ್ ಹಾಕಿ ಪ್ರೀಮಿಯರ್ ಲೀಗ್: ಸೆಮಿಫೈನಲ್‌ ಸೆಣಸಾಟ ಇಂದು

ಕೂರ್ಗ್ ಹಾಕಿ ಪ್ರೀಮಿಯರ್ ಲೀಗ್

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 4:52 IST
Last Updated 20 ಡಿಸೆಂಬರ್ 2020, 4:52 IST
ಪವಿನ್ ಪೊನ್ನಣ್ಣ ಫೌಂಡೇಷನ್ ಹಾಗೂ ಜೀಯಣ್ಣ ಗ್ರೂಪ್ಸ್  ನಡುವಿನ ಪಂದ್ಯ
ಪವಿನ್ ಪೊನ್ನಣ್ಣ ಫೌಂಡೇಷನ್ ಹಾಗೂ ಜೀಯಣ್ಣ ಗ್ರೂಪ್ಸ್  ನಡುವಿನ ಪಂದ್ಯ   

ಪೊನ್ನಂಪೇಟೆ: ಕೂರ್ಗ್ ಹಾಕಿ ಪ್ರೀಮಿಯರ್ ಲೀಗ್ ಕಮಿಟಿ, ಹಾಕಿ ಕರ್ನಾಟಕ ಮತ್ತು ಹಾಕಿ ಕೂರ್ಗ್ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೂರ್ಗ್ ಹಾಕಿ ಪ್ರೀಮಿಯರ್ ಲೀಗ್‍ನಲ್ಲಿ ಪವಿನ್ ಪೊನ್ನಣ್ಣ ಫೌಂಡೇಷನ್ ಹಾಗೂ ಗೋರ್ಸ್ ತಂಡಗಳು ಸೆಮಿಫೈನಲ್‍ಗೆ ಪ್ರವೇಶ ಪಡೆದಿದ್ದು, ಫೈನಲ್‍ಗೆ ಪ್ರವೇಶ ಪಡೆಯಲು ಭಾನುವಾರ ಮಧ್ಯಾಹ್ನ 3ಗಂಟೆಗೆ ಸೆಣಸಾಟ ನಡೆಸಲಿವೆ.

ಶನಿವಾರ ನಡೆದ ಮೊದಲ ಪ್ಲೇ ಆಫ್‍ನಲ್ಲಿ ಪವಿನ್ ಪೊನ್ನಣ್ಣ ಫೌಂಡೇಷನ್ ತಂಡವು ಜೀಯಣ್ಣ ಗ್ರೂಪ್ಸ್ ತಂಡವನ್ನು 3-1 ಗೋಲುಗಳಿಂದ ಮಣಿಸಿ ಸೆಮಿಗೆ ಪ್ರವೇಶ ಪಡೆದವು.

2 ನೇ ಪ್ಲೇ ಆಫ್‍ನಲ್ಲಿ ಗೋರ್ಸ್ ಹಾಗೂ ಸೌತ್ ಕೂರ್ಗ್ ಕ್ಲಬ್ ರೋಚಕ ಆಟದ ಮೂಲಕ ಗಮನ ಸೆಳೆಯಿತು. ಅಂತಿಮವಾಗಿ ಗೋರ್ಸ್ ತಂಡವು ಶೂಟೌಟ್‍ನಲ್ಲಿ 5-3 ಗೋಲುಗಳಿಂದ ಜಯಿಸಿತು.

ADVERTISEMENT

ಪಂದ್ಯ ಪುರುಷೋತ್ತಮ ಬೆಳ್ಳಿನಾಣ್ಯ ಬಹುಮಾನವನ್ನು ಪವಿನ್ ಪೊನ್ನಣ್ಣ ಫೌಂಡೇಷನ್ ತಂಡದ ಕೂತಂಡ ಬೋಪಣ್ಣ, ಸೌತ್‍ಕೂರ್ಗ್ ತಂಡದ ಮಚ್ಚಮಾಡ ಅಯ್ಯಪ್ಪ ಪಡೆದುಕೊಂಡರು. ಸುಳ್ಳಿಮಾಡ ಸುಬ್ಬಯ್ಯ ವೀಕ್ಷಕ ವಿವರಣೆ ನೀಡಿದರು. ತಾಂತ್ರಿಕ ವರ್ಗದಲ್ಲಿ ಗಣಪತಿ, ಅಪ್ಪಚ್ಚು, ಪವನ್, ರೋಶನ್, ಕಾವೇರಿ, ದೀಕ್ಷಿತ್, ಸುಪ್ರಿಯಾ, ಅರುಣ್ ಕಾರ್ಯನಿರ್ವಹಿಸಿದರು.

ಭಾನುವಾರದ ಪಂದ್ಯ: ಮಧ್ಯಾಹ್ನ 3ಗಂಟೆಗೆ: ಪವಿನ್ ಪೊನ್ನಣ್ಣ ಫೌಂಡೇಷನ್ – ಗೋರ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.