ADVERTISEMENT

ರಾಜ್ಯದಲ್ಲಿ ಸೈಬರ್ ಅಪರಾಧ, ಮಾದಕ ವಸ್ತು ವ್ಯಸನ ಹೆಚ್ಚಳ: ಗೃಹ ಸಚಿವ ಜಿ.ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 25 ಜನವರಿ 2024, 12:56 IST
Last Updated 25 ಜನವರಿ 2024, 12:56 IST
ಜಿ.ಪರಮೇಶ್ವರ, ಗೃಹ ಸಚಿವ
ಜಿ.ಪರಮೇಶ್ವರ, ಗೃಹ ಸಚಿವ   

ಮಡಿಕೇರಿ: ಸೈಬರ್ ಅಪರಾಧಗಳು ಹಾಗೂ ಮಾದಕವಸ್ತುಗಳ ವ್ಯಸನ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚುತ್ತಿದೆ ಎಂದು ಗೃಹ ಖಾತೆ ಸಚಿವ ಜಿ.ಪರಮೇಶ್ವರ್ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಗಾಂಧಿ ಮೈದಾನದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು‌.

ಸೈಬರ್ ಅಪರಾಧಗಳನ್ನು ಹಾಗೂ ಮಾದಕವಸ್ತು ಜಾಲವನ್ನು ನಿಯಂತ್ರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.