ADVERTISEMENT

ಕಾಲಮಿತಿ ಮೀರಿದರೆ ಅಂಕ ಕಡಿತ! | ದಸರಾ ದಶಮಂಟಪ ಸಮಿತಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 8:37 IST
Last Updated 5 ಅಕ್ಟೋಬರ್ 2022, 8:37 IST

ಮಡಿಕೇರಿ: ವಿಜಯದಶಮಿಯಂದು ನಡೆಯುವ ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಮಂಟಪಗಳು ನಿಗದಿತ ಸಮಯಕ್ಕೆ ನಿಗದಿತ ಸ್ಥಳಕ್ಕೆ ಬಾರದಿದ್ದರೆ ಅಂಕಗಳನ್ನು ಕಡಿತಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ.

‘ಈ ಬಾರಿ ಸಮಯಕ್ಕೆ ಸರಿಯಾಗಿ ಶಿಸ್ತುಬದ್ಧವಾಗಿ ಶೋಭಾಯಾತ್ರೆ ನಡೆಸಲಾಗುವುದು. ಅದಕ್ಕಾಗಿ ಕಾಲಮಿತಿ ಸೇರಿದಂತೆ ಅನೇಕ ನಿಯಮಗಳನ್ನು ಜಾರಿಗೊಳಿಸಲಾಗಿದೆ. ನಿಯಮ ಮೀರಿದರೆ ಮಂಟಪಗಳಿಗೆ ನೀಡುವ ಅಂಕಗಳನ್ನು ಕಡಿತ ಮಾಡಲಾಗುವುದು’ ಎಂದು ಸಮಿತಿಯ ಅಧ್ಯಕ್ಷ ಮನು ಮಂಜುನಾಥ್ ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪೇಟೆ ಶ್ರೀರಾಮಮಂದಿರದ ಮಂಟಪವು ಅ. 5ರಂದು ರಾತ್ರಿ 10 ಗಂಟೆಗೆ ಗಾಂಧಿ ಮೈದಾನದ ಕಾಫಿಕೃಪ ಕಟ್ಟಡದ ಬಳಿ, ದೇಚೂರು ಶ್ರೀರಾಮಂದಿರದ ಮಂಟಪವು ರಾತ್ರಿ 11ಕ್ಕೆ ಆಂಜನೇಯ ದೇಗುಲದ ಮುಂಭಾಗ, ಚೌಡೇಶ್ವರಿ ದೇಗುಲದ ಮಂಟಪವು ರಾತ್ರಿ 11.45ಕ್ಕೆ ಹೋಟೆಲ್ ಪಾಪ್ಯೂಲರ್ ಮುಂಭಾಗ, ಕೋಟೆ ಗಣಪತಿ ಮಂಟಪವು ರಾತ್ರಿ 12.30ಕ್ಕೆ ನಗರ ಪೊಲೀಸ್ ಠಾಣೆ ಮುಂಭಾಗ, ಕೋದಂಡ ರಾಮ ದೇಗುಲದ ಮಂಟಪವು ರಾತ್ರಿ 1.15ಕ್ಕೆ ಬಾಟಾ ಶೋರೂಂ ಮುಂಭಾಗ, ಕೋಟೆ ಮಾರಿಯಮ್ಮ ಮಂಟಪವು ರಾತ್ರಿ 1.45ಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗ, ಕರವಲೆ ಭಗವತಿ ದೇಗುಲದ ಮಂಟಪವು ರಾತ್ರಿ 2.30ಕ್ಕೆ ಸಿಂದೂರ್‌ ಬಟ್ಟೆ ಮಳಿಗೆ ಮುಂಭಾಗ, ದಂಡಿನ ಮಾರಿಯಮ್ಮ ಮಂಟಪವು ರಾತ್ರಿ 3 ಗಂಟೆಗೆ ನಗರ ಪೊಲೀಸ್ ಠಾಣೆ ಮಂಭಾಗ, ಕಂಚಿ ಕಾಮಾಕ್ಷಿ ಮಂಟಪವು ರಾತ್ರಿ 3.30ಕ್ಕೆ ವಿನೋದ್ ಮೆಡಿಕಲ್ಸ್ ಮುಂಭಾಗ, ಚೌಟಿ ಮಾರಿಯಮ್ಮ ಮಂಟಪವು ರಾತ್ರಿ 4 ಗಂಟೆಗೆ ಕಾವೇರಿ ಕಲಾಕ್ಷೇತ್ರದ ಮುಂಭಾಗ ಬರಬೇಕಿದೆ. ಅಲ್ಲಿ ತೀರ್ಪುಗಾರರ ಬರಲಿದ್ದಾರೆ ಎಂದರು.

ADVERTISEMENT

ಸಮಿತಿಯ ಉಪಾಧ್ಯಕ್ಷ ಸಿ.ಪಿ.ಹೇಮಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಕೆ.ಯಶವಂತ್, ಕಾರ್ಯಾಧ್ಯಕ್ಷ ಎ.ಆರ್.ಮಂಜುನಾಥ್, ಪ್ರಧಾನ ಸಂಚಾಲಕ ದಾಮೋದರ್, ಮುಖಂಡರಾದ ನಂದಾ ಉತ್ತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.