ಸೋಮವಾರಪೇಟೆ: ಮಹಾಭಾರತದಲ್ಲಿ ಬರುವ 101 ಕೌರವರ ಹೆಸರನ್ನು 54 ಸೆಕೆಂಡ್‌ನಲ್ಲಿ ಹೇಳುವ ಮೂಲಕ 4ನೇ ತರಗತಿ ವಿದ್ಯಾರ್ಥಿನಿ ಎಚ್. ಪ್ರೇಕ್ಷಾ, ಇಂಡಿಯಾ ಬುಕ್ ಆಫ್ ರೆಕಾರ್ಡ್–2024ರಲ್ಲಿ ದಾಖಲೆ ಮಾಡಿದ್ದಾಳೆ.
ಇಲ್ಲಿನ ಕ್ರಿಯೇಟಿವ್ ಅಕಾಡೆಮಿಯಲ್ಲಿ ಓದುತ್ತಿರುವ ಪ್ರೇಕ್ಷಾ, ಕೌರವ ವಂಶದ ಧೃತರಾಷ್ಟ್ರನ 100 ಪುತ್ರರು ಹಾಗೂ ಒಬ್ಬ ಪುತ್ರಿ ಹೆಸರನ್ನು ಹೇಳಿದ್ದಾಳೆ. ಈಕೆ ಅಬ್ಬೂರುಕಟ್ಟೆ ಗ್ರಾಮದ ಗುತ್ತಿಗೇದಾರ ಹರೀಶ್ ಹಾಗೂ ಸಿಂಧು ದಂಪತಿಯ ಪುತ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.