ADVERTISEMENT

ಸ್ಮಾರ್ಟ್ ಮೀಟರ್ | ಹೈಕೋರ್ಟ್‌ ನೋಟಿಸ್ ನೀಡಿದ್ದರಿಂದ ಅನುಕೂಲ; ಕೆ.ಜೆ.ಜಾರ್ಜ್

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 16:22 IST
Last Updated 25 ಏಪ್ರಿಲ್ 2025, 16:22 IST
ಸಚಿವ ಕೆ.ಜೆ.ಜಾರ್ಜ್
ಸಚಿವ ಕೆ.ಜೆ.ಜಾರ್ಜ್   

ಮಡಿಕೇರಿ: ‘ಸ್ಮಾರ್ಟ್ ಮೀಟರ್ ವಿಚಾರದಲ್ಲಿ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಕೊಟ್ಟಿರುವುದು ಒಳ್ಳೆಯದೇ ಆಯಿತು. ನಮ್ಮ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳಲು ಅವಕಾಶ ಸಿಕ್ಕಿದೆ’ ಎಂದು ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

‘ನ್ಯಾಯಾಲಯದ ಮುಂದೆ ನಮ್ಮ ದಾಖಲೆಗಳನ್ನಿಡಲು ಅನುಕೂಲವಾಯಿತು. ಅಲ್ಲಿಯೇ ತೀರ್ಮಾನವಾಗಲಿ. ತೀರ್ಪಿನ ನಂತರ ಪ್ರತಿಕ್ರಿಯಿಸುತ್ತೇನೆ’ ಎಂದು ಇಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

‘ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆಯಬಾರದಿತ್ತು. ಆದರೆ, ಅಲ್ಲಿನವರು ನಮ್ಮ ಜನರೊಂದಿಗೆ ನಿಂತು ಭಯೋತ್ಪಾದನೆಯನ್ನು ಖಂಡಿಸಿದ್ದಾರೆ. ಇದು ಸಮಾಧಾನದ ವಿಷಯ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.