ನಾಪೋಕ್ಲು: ಸಮೀಪದ ಪಾಲೂರು ಗ್ರಾಮದಲ್ಲಿ ಬೊಲೆರೋ ಜೀಪ್ ರಸ್ತೆಯಲ್ಲಿ ಪಲ್ಟಿಯಾಗಿ ಚಾಲಕನಿಗೆ ಗಾಯವಾಗಿದೆ.
ಗ್ರಾಮದ ರವಿಕುಮಾರ್ ಬೊಲೆರೋ ಜೀಪ್‌ನಲ್ಲಿ ನಾಪೋಕ್ಲುನಿಂದ ಮಡಿಕೇರಿಯತ್ತ ಹೋಗುತ್ತಿದ್ದರು. ಪಾಲೂರು ಗ್ರಾಮದ ರಸ್ತೆ ಇಳಿಜಾರಿನಲ್ಲಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಅಪಘಾತದಿಂದ ವಾಹನಕ್ಕೆ ಹಾನಿಯಾಗಿದ್ದು, ರವಿಕುಮಾರ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ನಾಪೋಕ್ಲು ಪೊಲೀಸರು ಸಾರ್ವಜನಿಕರ ಸಹಕಾರದಿಂದ ರಸ್ತೆಯಲ್ಲಿದ್ದ ವಾಹನವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.