ADVERTISEMENT

ಕೊಡಗು: ಮಡಿಕೇರಿಯಲ್ಲಿ ಕರಗೋತ್ಸವ ಆರಂಭ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 14:26 IST
Last Updated 22 ಸೆಪ್ಟೆಂಬರ್ 2025, 14:26 IST
   

ಮಡಿಕೇರಿ: ನಗರದಲ್ಲಿ ಸೋಮವಾರ ವಿಜೃಂಭಣೆಯ ಕರಗೋತ್ಸವ ಆರಂಭಗೊಂಡಿತು.

ಇಲ್ಲಿನ ನಾಲ್ಕು ಶಕ್ತಿದೇವತೆಗಳೆನಿಸಿದ ಕೋಟೆ ಮಾರಿಯಮ್ಮ, ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ ಹಾಗೂ ಕಂಚಿಕಾಮಾಕ್ಷಮ್ಮ ಅವರ ಕರಗಗಳನ್ನು ಹೊತ್ತ ಕರಗಧಾರಿಗಳು ರಾಜಬೀದಿಯಲ್ಲಿ ಹೆಜ್ಜೆ ಹಾಕುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಭಕ್ತ ಸಮೂಹ ಕೈಮುಗಿಯಿತು.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಕರಗೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಮಂಗಳವಾದ್ಯಗಳೊಂದಿಗೆ ಕರಗಗಳನ್ನು ಹೊತ್ತ ನಾಲ್ವರು ಕರಗಧಾರಿಗಳು ಮೆರವಣಿಗೆ ಹೊರಟರು.

ADVERTISEMENT

ಈ ಮೂಲಕ ಮಡಿಕೇರಿ ನಗರದ ‘ಬೆಳಕಿನ ದಸರೆ’ಗೆ ಕರಗೋತ್ಸವ ಮುನ್ನುಡಿ ಬರೆಯಿತು. ಸೆ. 23ರಿಂದ ಅ. 2ರವರೆಗೂ ಇಲ್ಲಿನ ಗಾಂಧಿ ಮೈದಾನದಲ್ಲಿ ನಿತ್ಯವೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ. 2ರಂದು ದಶಮಂಟಪಗಳ ಶೋಭಾಯಾತ್ರೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.