ಸೋಮವಾರಪೇಟೆ: ಇಲ್ಲಿನ ಜೂನಿಯರ್ ಕಾಲೇಜಿನ ಆಟದ ಮೈದಾನದ ತಡೆಗೋಡೆ ಪ್ರಥಮ ಮಳೆಗೆ ಒಂದು ಬದಿಗೆ ವಾಲಿದ್ದು, ಕುಸಿಯವ ಭೀತಿಯಲ್ಲಿದೆ.
₹40 ಲಕ್ಷ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣಗೊಂಡ ಗೋಡೆ ಅಲ್ಪ ಪ್ರಮಾಣದಲ್ಲಿ ವಾಲಿದೆ. ಹಾಗೆಯೇ ಮೈದಾನದ ನಡುವೆ ಹಾಕಲಾಗಿದ್ದ ಮಣ್ಣು ಜರುಗಿದ್ದು, ತಡೆಗೋಡೆ ಇನ್ನಷ್ಟು ವಾಲುವ ಆತಂಕ ಎದುರಾಗಿದೆ. ಕೆಳಭಾಗದಲ್ಲಿ ರಸ್ತೆ ಹಾಗೂ ವಾಸದ ಮನೆಗಳಿದ್ದು, ಒಂದು ವೇಳೆ ಗೋಡೆ ಬಿದ್ದರೆ ಅನಾಹುತ ಸಂಭವಿಸುವ ಆತಂಕ ಎದುರಾಗಿದೆ.
‘ತಡೆಗೋಡೆ ನಡುವೆ ಹಾಕಿರುವ ಮಣ್ಣು ಹೆಚ್ಚಾಗಿರುವ ಹಿನ್ನೆಲೆ ವಾಲಿದೆ. ಮಳೆ ಕಡಿಮೆಯಾದ ನಂತರ ಮಣ್ಣು ತೆಗೆದು, ಕೀ ವಾಲ್‌ಗಳನ್ನು ಅಳವಡಿಸಲಾಗುವುದು. ಗೋಡೆ ಸಂಪೂರ್ಣ ಕುಸಿಯುವ ಅಥವಾ ಬೀಳುವ ಆತಂಕ ಇಲ್ಲ’ ಎಂದು ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಕುಮಾರಸ್ವಾಮಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.